ಶನಿವಾರ, ಸೆಪ್ಟೆಂಬರ್ 22, 2018

480. ಗಣಪತಿ ಸ್ತುತಿ-2

ಗಣಪಗೆ ಪ್ರಾರ್ಥನೆ

ಗಣಪತಿಯ ಶ್ರೀ ಪಾದಕ್ಕೆ ನಮಿಸುತಲಿ
ಕರುಣೆ ತೋರಲು ಬೇಡುವ
ನಿತ್ಯ ನಮ್ಮನು ಪೊರೆಯೊ ಎಂದು
ಬೇಡಿ ಪಾದಕೆ ನಮಿಸುವ..

ಲಂಬೋದರನು ಲಕುಮಿಕರನು
ಭಕ್ತ ಪಾಲಿಗೆ ಒಲಿಯುವ
ಅಂಬಾಸುತ ಅನವರತ
ಮೊದಲ ಪೂಜೆಯ ಪಡೆಯುವ..

ಗಜಾನನನೇ ಏಕದಂತನೇ
ವಿಘ್ನ ನಾಶ ನೀ ಮಾಡುವೆ
ಗೌರಿ ತನಯನೆ ಬಾಲಚಂದ್ರನೆ
ಅನವರತವು ನಮ್ಮ ಕಾಯುುವೆ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ