ಶನಿವಾರ, ನವೆಂಬರ್ 3, 2018

562. ಕಲಿಕೆ

ಕಲಿಕೆ

ಮನೆಮನೆ ಮನೆಯಲಿ ನಾನು
ನಲಿ ನಲಿಯುತ ಕಲಿಯುವೆ ನಾನು..
ಹೃದಯವು ಅರಳುತಲಿರಲು
ಕಲಿಕೆಯು ಸುಲಭವು ತಾನೇ..
ಕಲಿಕೆಯಲೀ ಕಳೆಯುವೆನು ನನ್ನನೇ ನಾನೆಂದಿಗೂ
ನಗುನಗುತಾ ಕಳೆಯುವೆನು ನನ್ನ ಮನದ ಆ ಬೇಗೇ...

ಒಂದನೇ ಕಲಿಯುವುದಲ್ಲ
ಕಲಿಯಲು ಹಲವಾರಿವೆ ಎನಗೆ
ದಿನನಿತ್ಯ ಕಲಿಯುವೆನು ಹೊಸಹೊಸ ಪಾಠವ..
ಹಿರಿಯರಿಂದ ಮಕ್ಕಳಿಂದ ಕಲಿಯುವೆ ನೀತಿಯ

ಗುರುಗಳು ಕಲಿಸುವ ರೀತಿ
ಅದು ನನಗೆ ಬಹಳವೇ ಪ್ರೀತಿ.
ಕನಸಿನಲೂ ಕಲಿಯುವೆನು ಕಲಿಯಬೇಕೆನಿಸಿದ್ದ...
ಮನೆ ಹೊರಗೂ ಸ್ಮರಿಸುವೆನೂ ಕಲಿಕೆಯ ವಿಷಯವಾ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ