ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-23
ಏನೂ ಇಲ್ಲ ಈ ಜೀವನದಲ್ಲಿ, ದುಡಿದದ್ದು ಸಾಲಲ್ಲ ಖರ್ಚಿಗೆ.. ಅದು ಹೇಗೆ ಕೆಲವರು ಮಾತ್ರವೆ ಶ್ರೀಮಂತರು ಜಗತ್ತಿನಲ್ಲಿ!? ನಾವೇಕೆ ಯಾವಾಗಲು ಬಡವರು? ದೇವರೇಕೆ ನಮಗೆ ಮೋಸ ಮಾಡಿದ? ನಾವೇ ಯಾಕೆ ಒದ್ದಾಡಬೇಕು? ಪ್ರತಿಯೊಂದು ಆಸೆಗೂ ಪರದಾಡ ಬೇಕು? ನಮಗನಿಸಿದ್ದನ್ನು ಪಡೆಯಲು ಸಾಧ್ಯವೇ ಆಗುತ್ತಿಲ್ಲ ಏಕೆ? ಇದೆಲ್ಲ ನಮ್ಮನ್ನು ಕಾಡುವ ಸಾಧಾರಣ ಪ್ರಶ್ನೆ!
ಈ ಪ್ರಶ್ನೆ ಪ್ರಪಂಚದಲ್ಲಿ ಬದುಕುವ ಪ್ರತಿಯೊಬ್ಬರಿಗೂ ಇದೆ. 'ದೊಡ್ಡ ಮನೆಗೆ ದೊಡ್ಡ ಬಾಗಿಲು' ಎಂಬಂತೆ ಹಣವಿದ್ದೊಡೆ ಆಸೆಗಳ ಮಹಲುಗಳೂ ಹೆಚ್ಚುತ್ತವೆ. ಸಾಧಾರಣ ಮನುಷ್ಯ ಮಾರುತಿ ಕಾರು ಬೇಕೆಂದು ಆಸೆ ಪಟ್ಟರೆ ಸಿರಿವಂತ ಮರ್ಸಡೆಸ್ ಬೆಂಝ್ ಗೆ ಆಸೆಪಟ್ಟು ಅದಕ್ಕಾಗಿ ಶ್ರಮಿಸುತ್ತಿರುತ್ತಾನೆ! ಸಾಧಾರಣ ಮನುಷ್ಯ ವಾಸಿಸಲು ಯೋಗ್ಯವಾದ ತಕ್ಕ ಮಟ್ಟಿನ ಮನೆಯೊಂದು ಸಾಕೆಂದುಕೊಂಡರೆ ಶ್ರೀಮಂತನಾದವ ಹಲವಾರು ಮಹಡಿಗಳ ಮಹಲಿನ ಕನಸು ಕಾಣುತ್ತಿರುತ್ತಾನೆ. ಅದು ಆದೊಡನೆ ಬಾಡಿಗೆ ಕೊಡಲು ಮತ್ತೊಂದು ಮನೆ ಕಟ್ಟಿಸುವ ಐಡಿಯಾದಲ್ಲಿ ಇರುತ್ತಾನೆ. ಒಟ್ಟಿನಲ್ಲಿ ಯಾರೂ ನೆಮ್ಮದಿಯಿಂದ ಬದುಕುತ್ತಿಲ್ಲ!
ಮೋದಿ ನೋಟುಗಳನ್ನು ಬ್ಯಾನ್ ಮಾಡಿ ಡಿಜಿಟಲ್ ಟ್ರಾನ್ಸಾಕ್ಷನ್ ಜಾಸ್ತಿ ಮಾಡಿದ್ದೇನೋ ಸರಿ. ಕೋಟಾ ನೋಟುಗಳು ಬ್ಯಾಂಕ್ ಗೆ ನುಗ್ಗಿ ಬ್ಯಾಂಕುಗಳೆಲ್ಲಾ ಲಾಸ್ ಆಗಿ ಹಲವಾರು ಬ್ಯಾಂಕ್ ಗಳು ಮರ್ಜ್ ಆಗಿದ್ದೂ ಆಯ್ತು. ಬ್ಯಾಂಕುಗಳಲ್ಲಿ ಸರ್ವಿಸ್ ಚಾರ್ಜ್ ಕಟ್ ಮಾಡಿಕೊಳ್ಳುತ್ತಿರುವುದೂ ಆಗುತ್ತಿದೆ ತಾನೇ? ಕಪ್ಪು ಹಣ,
ವಿಪರೀತ ಹಣ ಇರುವವರಿಗೆ ಕ್ರಿಪ್ಟೋ ಕರೆನ್ಸಿ ಬಂದಿದೆ ಈಗ. ಅದರಲ್ಲಿ ಬಗ್ಸ್ ಕಾಯಿನ್ ಕೂಡಾ ಒಂದು. ಯಾವುದೇ ನೋಟಿನ ಚಲಾವಣೆ ಇಲ್ಲದೆ ಆನ್ ಲೈನಿನಲ್ಲೇ ದುಡ್ಡನ್ನು ಸಂಗ್ರಹಿಸಿ ಇಡುವುದು. ಅದರಲ್ಲೇ ದುಡ್ಡು ಟ್ರಾನ್ಸ್ಫರ್ ಮಾಡಿ ಪ್ರಪಂಚದ ಯಾವುದೇ ಮೂಲೆಯಿಂದ ಏನು ಬೇಕಾದರೂ ತರಿಸಿಕೊಳ್ಳಬಹುದು. ತಿಂಗಳಲ್ಲೇ ಕೋಟಿಗಟ್ಟಲೆ ಕಾಯಿನ್ಸ್ ಸಂಪಾದಿಸ ಬಹುದು. ಅದನ್ನು ಎಷ್ಟು ವರ್ಷಗಳ ಕಾಲವಾದರೂ ಮೋಸವಾಗದ ಹಾಗೆ ಬ್ಯಾಂಕಿನಲ್ಲಿ ಇಟ್ಟಂತೆ ಸೇಫಾಗಿ ಇಡಬಹುದು. ವನ್ ಕಾಯಿನ್ ಕೂಡಾ ಇದೆ. ಅದರ ಬೆಲೆಗಳು ಒಂದು ಕಾಯಿನ್ ಗೆ ಐವತ್ತು ಸಾವಿರದಿಂದ ಹಿಡಿದು ಮೂರೂವರೆ ಲಕ್ಷದವರೆಗೂ ಇದೆ. ಈಗ ಅದು 5ಜಿಯಲ್ಲಿ ಬರಲು ಪ್ರಾರಂಭಿಸಿದೆ. ಬಿಟ್ಗಳಲ್ಲೇ ಅದನ್ನು ಖರ್ಚು ಮಾಡುವುದು. ಮುಂದೆ ಭಾರತದಲ್ಲೂ ಲಕ್ಷ್ಮಿ ಕಾಯಿನ್, ಜಿಯೋ ಕಾಯಿನ್ ಗಳು ಆನ್ ಲೈನಿನಲ್ಲಿ ಬಂದು ಜನರು ಅದನ್ನು ತೆಗೆಯಲು ಮುಗಿ ಬಿದ್ದು, ಐದಾರು ವರುಷಗಳಲ್ಲೇ ತಮ್ಮಲ್ಲಿರುವ ಹಣವನ್ನು ನೂರುಪಟ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆಗಳು ತುಂಬಾ ಇವೆ. ಆನ್ ಲೈನ್ ಉಪಯೋಗ ಹೆಚ್ಚಿದಂತೆ ದುಡ್ಡಿರುವವರಿಗೆ ದುಡ್ಡು ಮಾಡಲು ಇನ್ನೇನೆಲ್ಲ ಬರುವುದೋ ಕಾದು ನೋಡಬೇಕು. ನೀವೇನಂತೀರಿ?
@ ಪ್ರೇಮ್@
ನಿಮ್ಮ ಅಭಿಪ್ರಾಯ ತಿಳಿಸಿ. premauday184@gmail.com
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ