ಬೆಳಕು
ಮನದ ತುಂಬಾ ಚೆಲ್ಲುತಿರಲಿ ಬೆಳಕು
ಎದೆಯ ತುಂಬಾ ಉರಿಯುತಿರಲಿ ಬೆಳಕು..
ಬದುಕ ಕಟ್ಟಲು ಬೇಕು ನಿತ್ಯ ಉಳಿಕೆ
ಉಳಿಸಿದ ಮನಕೆ ಮುದ ನೀಡುತಿರಲಿ ಬೆಳಕು..
ತಂದೆ ತಾಯಿಗೆ ಗೌರವ ನೀಡಲು ಬೇಕು
ಮನೆಮನೆಯಲಿ ಶಾಂತಿಯ ಹರಡುತಿರಲಿ ಬೆಳಕು..
ದಟ್ಟ ಅಡವಿಗೂ ಬೇಕು ಇಣುಕುವ ಸೂರ್ಯ
ಜೀವ ಜಂತುವಿಗೆಲ್ಲ ಪಸರಿಸಲಿ ಬೆಳಕು..
ಹುತ್ತದಲಿ ಮಲಗಿದ ನಾಗನಿಗೂ ಬೇಕು ಬೆಳಕು
ಎತ್ತೆತ್ತ ಹೋದರೂ ಕಾಣಲಿ ಬೆಳಕು..
ಒಂಟಿಯೆಂದ ಮೆದುಳಿಗೆ ಜಂಟಿಯನು ತುಂಬಿ
ಕಾಣಲಿ ಒಂಟೆ ಮೇಲೆ ಕೂತಂತೆ ಬೆಳಕು..
ಮನದಾಸರೆಯ ಸೋಂಕಿಗೆ ಅಂಟಿಕೊಳ್ಳದೆ
ಸ್ವಾರ್ಥರಹಿತವಾಗಿ ಪ್ರೇಮದಿ ಬೆಳಗಲಿ ಬೆಳಕು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ