ನೀ ಜೊತೆಗಿರು
ನನ್ನುಸಿರೆ ನೀ ಜೊತೆಗಿರೆ
ಕಡಲ ಮೇಲೆ ನಡೆಯಬೆಲ್ಲೆ ನಾ..
ನನ್ನೊಡಲೆ ನೀ ಒಡನಿರೆ
ಬದುಕ ದಾರಿ ಸವೆಸಬಲ್ಲೆ ನಾ...
ನಾವಿಬ್ಬರು ಒಟ್ಟಾದೊಡೆ
ಸಂತಸವ ಕಾಪಾಡುವೆ ನಿಜದಿ..
ಬಳಿಯಲಿರಲು ನೀನು ನನ್ನ
ಬಯಕೆ ಪೂರೈಸುವೆ ಹರುಷದಿ..
ಮುದ್ದು ಮುದ್ದು ಮಾತನಾಡಿ
ನಮ್ಮ ಬದುಕ ಕಟ್ಟುತಲಿ..
ಪೆದ್ದು ನಾನು ನಿನ್ನ ಮುಂದೆ
ಬಾಳ ಬಂಡಿ ಎಳೆಯೋಣ..
ಭಯದ ಭಾವವಿಲ್ಲ ನನಗೆ
ನೀನು ನನ್ನ ಜೊತೆಯಿರೆ
ಜಗವ ಮೆಟ್ಟಿ ನಿಲ್ಲ ಬಲ್ಲೆ
ನೀನು ಕೈಯ ಬಿಡದಿರೆ...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ