ಶುಕ್ರವಾರ, ನವೆಂಬರ್ 30, 2018

624. ಮಕ್ಕಳ ಕವನ-3

ಬಾರೋ ಕೃಷ್ಣ

ಬಾರೋ ಕೃಷ್ಣ ಗುಡ್ಡದಾಚೆ
ಹೋಗಿ ಆಟವಾಡುವ..
ತಾರೋ ನಮಗೆ ಲೋಟ ತುಂಬ
ಹಣ್ಣಿನ ರಸವಾ...

ಕೇಳ ಬೇಕು ಅಂದವಾದ
ನಿನ್ನ ಕೊಳಲ ಗಾನವಾ..
ನೋಡಬೇಕು ಬಗೆಬಗೆಯ
ಪ್ರಾಣಿ ಪಕ್ಷಿಯಾ..

ಸಾಗಬೇಕು ದೂರದೂರ
ನಿನ್ನ ಹಿಡಿಯಲೂ
ಹೋಗಬೇಕು ನಿತ್ಯ ನಾವು
ಗೋವು ಕಾಯಲೂ...

ಚಿಂತೆಯಿಲ್ಲ ಕಂತೆಯಿಲ್ಲ
ಬೆಣ್ಣೆ ಕದಿಯಲೂ
ನಾನು ನೀನು ಎಲ್ಲರೊಂದೆ
ಮುಂದೆ ಸಾಗಲೂ..

ಆಟದಲ್ಲಿ ಬೇಧವಿಲ್ಲ
ಎಂದೂ ನಮ್ಮಲಿ..
ಜಾತಿ ಮತದ ಹಂಗೇ ಇಲ್ಲ
ಮಕ್ಕಳಾಟದಲೀ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ