.ಅರ್ಪಣೆ
ಯಾವ ದೇವ ಎನ್ನ ಜೀವ
ಕೊಡುಗೆ ನೀಡಿ ಅವನೆ ಕಾವ..//
ಕಾಣಬಲ್ಲ ಕನಸ ಒಳಗೆ ಆಗಾಗ
ಹೇಳಬಲ್ಲ ತನ್ನನಿಸಿಕೆ ಬೇಕಾದಾಗ..
ತಿದ್ದುವನು ಪರೀಕ್ಷೆಯಿತ್ತು ಬಂದಾಗ..
ನೀಗಿಸುವನು ನಮ್ಮೆಲ್ಲರ ಸರ್ವ ರೋಗ..//
ಶಿವನೆ ನನ್ನ ಜನ್ಮ ಮಾಡಿಹೆ ನೀ ಸಾರ್ಥಕ
ನೀನಿಲ್ಲದೆ ಅದು ಎಂದೂ ನಿಷ್ಪ್ರಯೋಜಕ..
ನಿನ್ನ ವರಗಳಿಂದ ನಾನು ನಾಯಕ..
ಬದುಕುತಿಹೆನು ಮಾಡಿಕೊಂಡು ಒಳ್ಳೆ ಕಾಯಕ..//
ಬಾಳ ಹಣತೆ ಎಂದೂ ನಿಮ್ಮ ಮುಡಿಗೆ
ಅರ್ಪಣೆಯು ಜೀವನ ತಮ್ಮ ಅಡಿಗಳಿಗೆ
ವಂದಿಸುವೆನು ನಾನು ನಿನಗೆ ಅಡಿಗಡಿಗೆ
ನಮಿಸುತಿಹೆನು ನಿನಗಿದೋ ಬಾರಿ ಬಾರಿಗೆ..//
ನಾದದಲ್ಲಿ ನಿಮ್ಮ ಮನವು ಲೀನ
ಪ್ರೀತಿಯ ಭಕ್ತಿಯಲಿ ನೀನೆಂದು ಮಗ್ನ
ನೀಗುವೆ ನಮ್ಮ ಪಾಪಗಳ ವಿಘ್ನ
ಹರಸುವೆ ಮನಗಳ ಎಂದುಕೊಂಡು ತನ್ನ...//
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ