ಶುಕ್ರವಾರ, ನವೆಂಬರ್ 23, 2018

609. ಬೇಕು

ಬೇಕು

ನಿತ್ಯ ನಿನ್ನ ನವಿರು ಸ್ಪರ್ಶ
ಸತ್ಯ ಸಹಿತ ಸರಸ ಸಲ್ಲಾಪ
ಪಥ್ಯದಂಥ ಪದದ ಪಾಕ
ಎತ್ತಲೆತ್ತ ಏರಿ ಬರಲಿ..

ನೀನೆ ನೆನಪು ನೀಗಿ ನೀಡಿ
ವಿರಹ ವಿಧಿತ ವಿಧಿಯು ಬಾಗಿ
ವಚನ ಪಚನ ಸಿಂಚನವಾಗಿ
ಕರದ ವರದ ಮರೆವ ಕಾಡಿ..

ಕಣ್ಣ ಮುಂದೆ ನೀನು ಬೇಕು
ತಣ್ಣಗಿಹ ಪ್ರೀತಿ ಸಾಕು
ಬಣ್ಣ ಬಣ್ಣದ ಕನಸು ಹಾಕು
ಸುಣ್ಣದಂಥ ಬಯಕೆ ಬಿಸಾಕು..

ನನ್ನ ನಲ್ಲ ನಿನ್ನ ಬರುವು
ಬಂದ ಹಾಗೆ ಬಾನ ಬಯಲು
ತಂದು ನಿಂತು ಬೇಕು ಎನಲು
ನೀ ಬರುವೆಯ ನನ್ನ ಇದಿರು..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ