ಭಾನುವಾರ, ಮಾರ್ಚ್ 4, 2018

163. ಶಿವಲೀಲೆ-17

17. ಶಿವಲೀಲೆ ಬಲು ದೊಡ್ಡದು

ಶಿವಲೀಲೆ ಬಹು ದೊಡ್ಡದು
ಬಲು ದೊಡ್ಡು ಶಿವಲೀಲೆ ಬಲುದೊಡ್ಡದು //ಪ//

ಕಠಿನ ತಪ್ಪಸ್ಸು ಮಾಡಿದ
ರಾವಣನಿಗೆ ಶಿವನು ಒಲಿದ..
ಭಕ್ತಿಯ ಪರಾಕಷ್ಠೆ ಮೆಚ್ಚಿ
ಆತ್ಮಲಿಂಗವೇ ದಾನಮಾಡಿ ಬಿಟ್ಟ //ಶಿವಲೀಲೆ//

ದಾನವ-ರಾಕ್ಷಸರು ಸಮುದ್ರವ ಕಡೆದಾಗ ಉದ್ಭವಿಸಿದ ಕಾರ್ಕೋಟ ವಿಷವ
ತಾನೇ ಕುಡಿದುಬಿಟ್ಟ ತಾನು
ವಿಷಕಂಠನನೆಸಿ ನೀಲಿ ಬಣ್ಣವಾದ //ಶಿವಲೀಲೆ//

ಭಸ್ಮಾಸುರನ ಕಾಟ ವಿಪರೀತವಾದಾಗ,
ವಿಷ್ಣುವೇ ಮೋಹಿನಿಯ ರೂಪವ ತಾಳಿದಾಗ..
ಮೋಹಿಸಿ ಅವಳನ್ನು ಆ ರಾಕ್ಷಸನ ಕೊಂದೆ
ಭೂಮಿಗೆ ನೆಮ್ಮದಿಯ ನೀ ತಂದುಕೊಟ್ಟೆ//ಶಿವಲೀಲೆ//

ಮದನನ ಜೀವವನ್ನು ಕಣ್ಣಲ್ಲೇ ಸುಟ್ಟುಬಿಟ್ಟೆ,
ಚಂದಿರನ ತನ್ನ ತಲೆಯಮೇಲೆ ಇಟ್ಟುಕೊಂಡು ಬಿಟ್ಟೆ
ಗಂಗೆಯ ತನ್ನ ಮುಡಿಯಲ್ಲೇ ಸುತ್ತಿಬಿಟ್ಟೆ,
ಭೂಮಿಗೆ ಜಲಧಾರೆ ತಂದು ಜನರ ಬದುಕಿಸಿಬಿಟ್ಟೆ //ಶಿವಲೀಲೆ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ