31.
ಕಾಣದಂತೆ ವರವ ಕೊಟ್ಟನು
ನಮ್ಮ ಶಿವ ಭಕ್ತರಿಗೆ ಶಕ್ತಿ ಕೊಟ್ಟನು
ಕೇಳಿದ್ದೆಲ್ಲಾ ಕೊಟ್ಟು ಪ್ರೀತಿಯನು ಇಟ್ಟು
ಹಂಚಿರೆನುತ ಕೈಲಾಸ ಸೇರಿದ…..
ಹಂಚಿ ತಿಂದು ಬದುಕಿರೆಂದನು
ನಮ್ಮ ಶಿವ ಮಾಲಿನ್ಯ ಬಿಡಿರಿ ಎಂದನು
ಪರಿಸರವ ಕುಲಗೆಡಿಸಿ ಕಾಡನ್ನು ಕಡಿದಾಗ
ಕೈಲಾಸ ಏರಿ ನಮ್ಮನೆಲ್ಲ ಮರೆತುಬಿಟ್ಟನು…..
ಪ್ರಾಣಿಗಳ ಹಿಂಸಿಸದಿರಿ ಎಂದನು
ನಮ್ಮ ಶಿವ ನದಿನೀರನ್ನು ಕುಡಿಯಿರೆಂದನು
ನೀರನ್ನೆಲ್ಲ ಮಲಿನ ಮಾಡಿದ ಕಂಡು
ಬೇಸರದಿ ನಮ್ಮ ಕೈಲಾಸ ಸೇರಿಕೊಂಡನು….
ಹಸಿರನ್ನು ಬೆಳೆಯಿರೆಂದನು
ನಮ್ಮ ಶಿವ ಪ್ಲಾಸ್ಟಿಕ್ ಬೇಡವೆಂದನು
ರಸ್ತೆ ಬದಿ ಕಸವ ಹಾಕಿ ಗುಂಡಿ ತೋಡಿದ್ದ ಕಂಡು
ಮುನಿಸಿನಲ್ಲಿ ಕೈಲಾಸ ಸೇರಿಕೊಂಡನು....
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ