19. ಲಿಂಗಕೆ ಶರಣು
ನಮ್ಮನು ಕಾಯುವ ಭಕ್ತರ ಪೊರೆವ
ಎಲ್ಲರ ಹರಸುವ ಎಲ್ಲರ ಮೆರೆಸುವ ಲಿಂಗಕೆ ಶರಣು..
ಬಗೆ ಬಗೆ ಪುಷ್ಪದಿ ಅಲಂಕಾರಗೊಳ್ಳುವ
ವಿಧವಿಧ ತೈಲದಿ ಅಭಿಷೇಕ ಪಡೆಯುವ ಲಿಂಗಕೆ ಶರಣು..
ಪ್ರತಿನಿತ್ಯ ಪೂಜೆಯ ಪಡೆದು ಆಶೀರ್ವದಿಸುವ
ದಿನನಿತ್ಯ ಮಿಂಚುವ, ಶಕ್ತಿಯ ಪಡೆಯುವ ಲಿಂಗಕೆ ಶರಣು...
ಬಿಲ್ವಪತ್ರೆ ಹೂ ಹಾಲು ನೀರು ತೈಲ ಜೇನು ತುಪ್ಪದಿ
ಅಭಿಷೇಕಗೊಂಡು ವರವನು ಕರುಣಿಪ ಲಿಂಗಕೆ ಶರಣು...
ರುದ್ರಾಭಿಷೇಕ, ಕಲಶಾಭಿಷೇಕ ತೈಲಾಭಿಷೇಕ ಕ್ಷೀರಾಭಿಷೇಕ
ಅಭ್ಯಂಜನ ಆರತಿ ಅಕ್ಷತೆ ಪಡೆಯುವ ಲಿಂಗಕೆ ಶರಣು...
ಭಕುತರ ಸಲಹುವ ನ್ಯಾಯ ನೀತಿ ಮೂರ್ತಿವೆತ್ತ
ಭಕ್ತಿಯಿಂದ ವಂದನೆ ಪಡೆದು ಭಕುತಗೆ ಒಲಿವ ಲಿಂಗಕೆ ಶರಣು..
ನಾಗಾಭರಣ ಕರುಣಾಮಯ ಶಂಭೋ ಶಿವನೆ
ಹೂಮಾಲೆ ಏರಿಸಿ, ಶೃಂಗಾರಗೊಂಡು ಮೆರೆವಂಥ ಲಿಂಗಕೆ ಶರಣು..
ಪಾರ್ವತಿ ಪೂಜಿಸಿದ ಗಣಪತಿ ಸ್ಥಾಪಿಸಿದ
ಬೇಡರ ಕಣ್ಣಪ್ಪ ಕಣ್ಣನು ಅರ್ಪಿಸಿದ ಲಿಂಗಕೆ ಶರಣು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ