ನೀ ಬಂದೆ ಬಿರುಗಾಳಿಯೆದ್ದ ಬಾಳಲಿ ಮೋಡವಾಗಿ ಗೆಳೆಯ
ಕಲಸು ಮೇಲೋಗರವಾದ ಮನದ ಭಾವನೆಗಳ ಕಲಕಿದೆ ಗೆಳೆಯ.
ಹಚ್ಚ ಹಸಿರಿನ ಬದುಕ ಪೈರನ್ನು ನೀರು ಹರಿಸಿ ಪೋಷಿಸಿ
ಬಿಳಿಯ ಹಾಲಿನಂಥ ಬಾಳ ಬಂಡಿಗೆ ಚಕ್ರವೊಂದ ಜೋಡಿಸಿದೆ ಗೆಳೆಯ.
ಬದುಕ ಖಾಲಿ ಹಾಳೆಗಳಲಿ ಮುದ್ದಾದ ಅಕ್ಷರಗಳ ಕವಿತೆ ಬರೆದು
ಕನಸ ಕಣ್ಣೊಳಗಿಟ್ಟು ಬಳಲಿದಾಗ ನನಸ ಮಾಡಿದೆ ಗೆಳೆಯ.
ಬತ್ತಿ ಹೋಗಿದ್ದ ಉತ್ಸಾಹದ ಚಿಲುಮೆಯ ತುಂಬಿಸಿ ತುಳುಕಿಸಿ
ಬರಡಾಗಿದ್ದ ಬಾಳನು ಶಶಿ ಕಿರಣವಾಗಿ ಬೆಳಗಿಸಿದೆ ಗೆಳೆಯ.
ಮನ ಮಾನಸಗಳ ಜೊತೆ ಹೃದಯವನೂ ಜೋಡಿಸಿ
ಹೃದಯಾಂತರಾಳದ ಭಾವನೆಗಳ ಪುಟಿದೆಬ್ಬಿಸುದೆ ಗೆಳೆಯ.
ಬೇಸಿಗೆಯ ಬಿರು ಬಿಸಿಲಿಗೆ ಬಿರುಕು ಬಿಟ್ಟ ನೆಲವ ತಣಿಸಿ
ಮನದಾಳದ ದಾಹಕ್ಕೆ ಪ್ರೇಮ ಚಿಲುಮೆ ಚಿಮ್ಮಿಸಿದೆ ಗೆಳೆಯ.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ