30.ಕಾಪಾಡು ಶಿವ
ಕಾಪಾಡು ಶ್ರೀ ಸ್ವಾಮಿ ಮಂಜುನಾಥನೇ
ಆರತಿ ಬೆಳಗುವೆ, ಪೂಜೆಯ ಮಾಡುವೆ
ನನಗೆ ನೀ ಆಶೀರ್ವದಿಸು…
ನನ್ನವರಾರೂ ನನ್ನಾ ಬಳಿ ಬರಲೇ ಇಲ್ಲ
ಕಷ್ಟದ ಸಮಯದಿ ನೀನೆ ಎಲ್ಲ
ಪರೀಕ್ಷೆಯಿರಿಸಿದೆ, ನನ್ನ ಗೆಲ್ಲಿಸಿದೆ
ನನ್ನ ಬಾಳಿಗೆ ಬಂಗಾರವಾಗಿದೆ /ಕಾಪಾಡು/
ನೀನಿರದೆ ನನಗೆ ಬಾಳೇ ಇಲ್ಲ
ನನ್ನ ಜೀವನ ನೀನೇ ಬೆಳಗುವೆಯಲ್ಲ
ಕಷ್ಟವೇ ಬರಲಿ ಸುಖವೇ ಇರಲಿ
ನಿನ್ನೊಡನೆ ದಿನವ ಕಳೆಯುತಿರುವೆನಲ್ಲ /ಕಾಪಾಡು/
ಬಡವರು ಧನಿಕರು ಒಂದೇ ನಿನಗೆಲ್ಲ
ಗುಣವನು ನೋಡಿ ಅಳೆಯುವೆಯಲ್ಲ
ಕಷ್ಟವ ಕೊಟ್ಟು ಪರೀಕ್ಷೆ ಮಾಡಿ ತಿಳಿದು ನೀನು
ಇಷ್ಟವ ಪಾಲಿಸಿ ಖುಷಿಯನು ಹಂಚುವೇ ನೀನು /ಕಾಪಾಡು /
ಮನುಜಗೆ ಭಕ್ತಿಯ ರಸವನು ನೀಡು
ಶಕ್ತಿಯ ಕೊಟ್ಟು ವೈರಿಯ ನೀಗು
ದೀನ ದಲಿತರ ಸೇವೆಯ ಮಾಡುವಂಥ
ಶಕ್ತಿಯ ಕೊಟ್ಟು ಈಶ ಕಾಪಾಡು /ಕಾಪಾಡು/
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ