ಶನಿವಾರ, ಮಾರ್ಚ್ 24, 2018

199. ಪ್ರೀತಿಯಿಂದಲೆ ಜಗತ್ತು..

ಕತೆ ಬರೆಯಲು ಕುಳಿತೆ. ಮನ ಮನ ಬಂದಂತೆ ಬರೆಯುವೆನೆಂದಿತು, ಹೃದಯ ಸಾಥ್ ಕೊಡಲಿಲ್ಲ, ನಾ ಹೇಳುವುದ ಬರೆ ಎಂದಿತು. ಮನಕ್ಕೆ ಮನಬಂದಂತೆ ಇರುವುದ ಬಿಟ್ಟು, ಇರದುದರೆಡೆಗೆ ಯೋಚಿಸುವುದ ಬಿಟ್ಟು ಇನ್ನೇನಿದೆ ಕೆಲಸ ಹೇಳಿ?

ಮೈ ಮನ ತಣ್ಣಗಾಗಿರಲು ಮನದಲ್ಲಿ ತೃಪ್ತಿ ಇರಬೇಕು. ತೃಪ್ತಿ ಬರಲು ಪ್ರೀತಿ ಮೊಗೆಮೊಗೆದು ಉಕ್ಕುತಿರಬೇಕು. ಪ್ರಪಂಚದ ದೊಡ್ಡ ಖಾಯಿಲೆ ಪ್ರೀತಿಯ ಕೊರತೆ. ಪ್ರೀತಿಯೊಂದಿದ್ದರೆ ಜಗದೊಳಾವ ನೋವನೂ ಅನುಭವಿಸುವ ಶಕ್ತಿ ನಮಗಿರುತ್ತದೆ. ಪ್ರೀತಿ ಇಲ್ಲದಿರೆ ಸುಖದ ಸುಪ್ಪತ್ತಿಗೆಯೂ ಮುಳ್ಳಿನ ಹಾಸಿಗೆಯಂತಾಗುವುದು.

ಮಾನವ ಮತ್ತು ಪ್ರಾಣಿಗಳಿಗೆ ಮಾತ್ರವಲ್ಲ, ಪಕ್ಷಿ -ಕೀಟ ಹುಳುಗಳಿಗೂ ಪ್ರೀತಿಯ ಮಹತ್ವ ತಿಳಿದಿದೆ. ಎಲ್ಲವೂ ಪ್ರೀತಿಗೆ ಸ್ಪಂದಿಸುತ್ತವೆ. ಮಾಂಸವನ್ನೇ ತಿಂದು ಬದುಕುವ ಹುಲಿ ಸಿಂಹಗಳೂ ಕೂಡ ಪ್ರೀತಿಸಿದವರನ್ನು ಹಿಡಿದು ಸಾಯಿಸಲಾರವು. ಪ್ರೀತಿಗೆ ಪ್ರಪಂಚದಲ್ಲಿ ಪ್ರೀತಿಯೇ ಸಾಟಿ.

ದ.ರಾ .ಬೇಂದ್ರೆಯವರು ಹೇಳಿದಂತೆ
'ನಾನು ಬಡವಿ, ಆತ ಬಡವ,
ಒಲವೆ ನನ್ನ ಬದುಕು
ಬಳಸಿ ಕೊಂಡೆವದನೆ ನಾವು
ಅದಕು ಇದಕು ಎದಕು'
ಪ್ರೀತಿಯೊಂದಿದ್ದರೆ ಹೇಗೆ ಬೇಕಾದರೂ ಬಾಳು ನಡೆಸಬಹುದೆಂಬ ಸಂದೇಶ ಎಲ್ಲೆಡೆ ಸಾರುತ್ತದೆ. ಪ್ರೀತಿಯ ವಿಷಯದ ಮೇಲೆಯೇ ಹಲವಾರು ಕಥೆ,ಕವನ,ಕಾದಂಬರಿ,ನಾಟಕ,ಚಲನಚಿತ್ರಗಳು ರಚನೆಯಾಗಿ ಜನಮಣ್ಣನೆ ಗಳಿಸಿವೆ. ಒಬ್ಬನ ಉಳಿವಿಗೂ ಅಳಿವಿಗೂ ಪ್ರೀತಿಯೇ ಕಾರಣವಾಗಿದೆ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ