ಭಾನುವಾರ, ಮಾರ್ಚ್ 4, 2018

167. ಶಿವಸ್ತುತಿ -21

21. ಹಾಡ ಬನ್ನಿರಿ

ಹಾಡಬನ್ನಿರಿ ಹಾಡ ಹಾಡ ಬನ್ನಿರಿ
ಮಾಡಬನ್ನಿರಿ ಶಿವಧ್ಯಾನ ಮಾಡಬನ್ನಿರಿ//

ಸೇರಬನ್ನಿರಿ ಶಿವಾಲಯ ಸೇರಬನ್ನಿರಿ
ಹೂವತನ್ನಿರಿ ಮಹಾದೇವಗೆ ಹೂವತನ್ನಿರಿ

ಭಜನೆ ಮಾಡಿರಿ ಹರನ ಭಜನೆ ಮಾಡಿರಿ
ಹಾಡಿ ಹೊಗಳಿರಿ ಶಿವನ ಹಾಡಿ ಹೊಗಳಿರಿ//

ಭಯವ ತೊರೆಯಿರಿ ಮನದ ಭಯವ ತೊರೆಯಿರಿ
ಮುಂದೆ ಸಾಗಿರಿ ಸತ್ಯದಿ ಮುಂದೆ ಸಾಗಿರಿ//

ನಾಮ ಸ್ತುತಿಸಿರಿ ಶಿವನಾಮ ಸ್ತುತಿಸಿರಿ
ಬಾಗಿನಮಿಸಿ ಈಶಗೆ ಬಾಗಿ ನಮಿಸಿರಿ//

ಪೂಜೆ ಮಾಡಿರಿ ಲಿಂಗಕೆ ಪೂಜೆ ಮಾಡಿರಿ
ನಾಮ ಸ್ಮರಿಸಿರಿ ಈಶನ ನಾಮ ಸ್ಮರಿಸಿರಿ

ದೀಪ ಬೆಳಗಿರಿ ಶಿವನಿಗೆ ದೀಪ ಬೆಳಗಿರಿ
ಸೇವೆ ಮಾಡಿರಿ ಹರನ ಸೇವೆ ಮಾಡಿರಿ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ