ನಾನೂ ಬರಲೇ
ನಾನೂ ಬರಲೇ
ನಿನ್ನೊಡನಾಡಲು..
ನೀರಿನ ಆಟಕೆ
ಜೊತೆಯಲಿ ಸೇರಲು..
ಮಳೆಯಲಿ ನೆನೆಯಲು
ಕಪ್ಪೆಯ ಹಿಡಿಯಲು
ಮೀನಿನ ಓಟಕೆ
ನಗುತಾ ನಲಿಯಲು...
ನಾನೂ ಬರಲೇ
ಶಾಲನು ತರಲೇ
ನೀರಿಗೆ ಬೀಸಿ
ಮರಿ ಮೀನ ಹಿಡಿಯಲು..
ಜಗವನೆ ಮರೆತು
ನೀರಲಿ ಕುಣಿಯಲು
ಬಾಲ್ಯಕೆ ಸರಿಯಾದ
ಅರ್ಥವ ತರಲು...
ನಾನೂ ಬರಲೆ
ಲೋಕವ ಮರೆಯಲು..
ನೀರಿನ ಝರಿಯಲಿ
ನಿನ್ನೊಡನಾಡಲು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ