ಗಝಲ್
ಬರಡಾದ ಬಾಳ ಬಂಡಿಯಲಿ ನಿನ್ನ ಪಡೆವುದು ನನ್ನ ಕನಸಾಗಿತ್ತು
ನಿನ್ನೊಡನೆ ನನ್ನ ಬದುಕ ರಥ ಎಳೆಯುವುದು ನನ್ನ ಕನಸಾಗಿತ್ತು...
ತಾರೆಯ ಕಿತ್ತು ನಿನ್ನ ಮುಡಿಗೆ ಮುಡಿಸಿ
ಚಂದಿರನ ಇಟ್ಟು ಸಿಂಗರಿಸುವುದು ನನ್ನ ಕನಸಾಗಿತ್ತು.
ಚಂದ್ರಲೋಕಕೆ ನಿನ್ನ ಕರೆದೊಯ್ದು ಕೂರಿಸಿ
ಅಲ್ಲೆ ಮಧುಚಂದ್ರದಾಚರಣೆ ಮಾಡುವುದು ನನ್ನ ಕನಸಾಗಿತ್ತು..
ಅಚ್ಚ ಬಿಳಿಯ ಮೈಸೂರ ಮಲ್ಲಿಗೆಯ ರಾಶಿಯಲಿ
ನಿನ್ನ ಪವಡಿಸಿ ನಿನ್ನಂದವ ಆಸ್ವಾದಿಸುವುದು ನನ್ನ ಕನಸಾಗಿತ್ತು..
ನಿನ್ನ ಕಣ್ಣ ಕಾಂತಿಯ ಬಿಂಬದ ಮಸೂರದಿ
ನನ್ನ ನಾ ನೋಡುತ ಜಗವ ಮರೆವುದು ನನ್ನ ಕನಸಾಗಿತ್ತು..
ಸಾಗರ ತೀರದಲಿ ಭೂಮಂಡಲ ಮರೆತು
ನನ್ನಲಿ ನೀನು ನಿನ್ನಲಿ ನಾನು ಐಕ್ಯವಾಗುವುದು ನನ್ನ ಕನಸಾಗಿತ್ತು.
ನಭದ ನೀಲಿಯಲಿ ಪಕ್ಷಿಗಳ ತೆರದಿ ಪ್ರೇಮದಿ
ನಾವಿಬ್ಬರೇ ಹಾರಾಡಿ ಆನಂದಿಸುವುದು ನನ್ನ ಕನಸಾಗಿತ್ತು..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ