ಕವನ
ನಾ ಬಿದ್ ಬಿಟ್ನಲ್ಲೇ....
ನೀ ಹಂಗ ನೋಡಕ್ಹತ್ತಿಕೊಂಡು
ನನ್ನ ಮನಸ್ಯಾಗ ಪ್ರೀತಿಯ
ಬೀಜವ ಬಿತ್ತಿ ಬಿಟ್ಯಲ್ಲೇ...
ನನ್ನ ಮನದ ಒಳಗ
ನಿನ್ನಾ ಕುಡಿನೋಟ ಹೊಕ್ಕಿ
ಕಾವು ಕೊಟ್ ಬಿಡ್ತಲ್ಲೇ...
ತುಂಟ ನಗೆಯ ನಕ್ಕು ನಕ್ಕು
ತಂಟೆ ಮಾಡಿ ನನ್ನ ಮನವ
ಹೊಡ್ಕೊಂಬಿಟ್ಯಲ್ಲೇ...ರಾಣಿ..
ನನ್ನ ಮನದ ಗೂಡಿನಾಗೆ
ಮೊಟ್ಟೆ ಇಟ್ಯಲ್ಲೇ..
ನನ್ನ ಹೃದಯ ರಾಜ್ಯದಾಗೆ
ಕುಂತ್ ಬಿಟ್ಯಲ್ಲೇ...ಗಟ್ಯಾಗಿ...
ಕುಂತ್ ಬಿಟ್ಯಲ್ಲೇ..
ನೀನೇ ನಾನು ನಾನೇ ನೀನು
ಆಗಿ ಬಿಟ್ವಲ್ಲೇ...
ನಿನ್ನ ಕುಡಿ ನೋಟದಾಗ
ನನ್ನೇ ನಾನು ಕಳ್ಕೊಂಡು ಬಿಟ್ನಲ್ಲೇ..
ಮನದ ಜೀವ ಹಾರಿ ಹೋಗಿ
ನಿನ್ನ ಒಳಗೆ ಸೇರ್ಕೊಂಡ್ ಬಿಡ್ತಲ್ಲೇ... ನಲ್ಲೆ..
ನನ್ನ ಜೀವ ನಿನ್ನ ಸೇರ್ತಲ್ಲೇ..
ನಾನು ನಿನ್ನವನಾಗ್ ಬಿಟ್ನಲ್ಲೇ...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ