ಶಾಲೆಯ ಕಲಿಕೆ
ಪುಸ್ತಕ ಕೊಟ್ಟು,
ಬಟ್ಟೆಯ ತೊಟ್ಟು,
ಸೈಕಲ್ ,ಶೂಗಳು ಬರುತಿರಲು
ಕಲಿಕೆಯು ಸಂತಸ ತಾನೇ?
ಡೈರಿಯ ತೆರೆದು
ಚಿತ್ರವ ಬರೆದು
ಮಾದರಿ ಮಾಡಿ, ನೃತ್ಯವನಾಡಿ
ಕಲಿಕೆಯು ಸಂತಸ ತಾನೇ?
ಬಸ್ಸಿಗೆ ಪಾಸು,
ನಲಿಕಲಿ ಕ್ಲಾಸು
ನಲಿಯುತ ಕುಣಿಯುತ ಎಲ್ಲಾ
ಕಲಿಕೆಯು ಸಂತಸ ತಾನೇ?
ನೋಡುತ ಕಲಿತು
ಮಾಡುತ ತಿಳಿದು
ಕಂಪ್ಯೂಟರ್ ಪರದೆಯ ಒತ್ತುತಲಿ
ಕಲಿಕೆಯು ಖುಷಿಯು ತಾನೇ?
ಟಿ.ವಿಯ ನೋಡುತ,
ಸ್ಮಾರ್ಟ್ ಕ್ಲಾಸಲಿ
ಪರದೆಯ ಮೇಲೆ ಓದುವ
ಕಲಿಕೆಯು ಸಂಭ್ರಮ ತಾನೇ?
ಯೋಜನೆ ಮಾಡುತ
ರೇಡಿಯೋ ಕೇಳುತ
ಪ್ರತಿಭಾ ಕಾರಂಜಿಯ ಅವಕಾಶದಿ
ಕಲಿಕೆಯು ಸಂತಸ ತಾನೇ?
ಕಲೋತ್ಸವ ಗಾನ
ಕ್ಷೀರದ ಪಾನ
ಬಿಸಿ ಬಿಸಿ ಊಟವ ಮಾಡುತಲಿರಲು
ಕಲಿಕೆಯು ಸಡಗರ ತಾನೇ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ