ಶನಿವಾರ, ಜನವರಿ 19, 2019

716. ಅಡಿಗೆಮನೆ ಕವನ

ಅಡಿಗೆಮನೆ ಕವನ

ಒಲೆ ವ್ಯಗ್ರವಾಗಿತ್ತು, ಗ್ಯಾಸ್ ಖಾಲಿಯಾಗಿತ್ತು!
ನಾಬ್ ತುಕ್ಕು ಹಿಡಿದಿತ್ತು,
ಪೈಪ್ ಲೀಕಾಗಿತ್ತು!
ಸ್ಟಾಂಡ್ ಹಾಳಾಗಿತ್ತು,
ಫ್ಲೇಮ್ ಕೋಪಗೊಂಡಿತ್ತು!

ಅಮ್ಮನ ಕೈಯ ಹಿತವಾದ ಸ್ಪರ್ಶವಿರಲಿಲ್ಲ!
ಪ್ರೀತಿಯ ಗಾನ, ಸಂಗೀತವೂ ಇರಲಿಲ್ಲ!
ಸ್ವಚ್ಛ ಹೃದಯದ ತ್ಯಾಗ ಭಾವನೆಗಳಿರಲಿಲ್ಲ,
ಇತರರಿಗಾಗಿ ಹರಿಸಿದ ಕಣ್ಣೀರ ಹನಿಗಳಿರಲಿಲ್ಲ!

ಯಾರದೋ ಗಡಸು ಕೈಗಳು,
ಬೇಯಿಸಿ,ತಿಂದು ಹೋಗುವುವು,
ಮತ್ತೆ ಹಸಿವಾದಾಗ ವಕ್ಕರಿಸುವವು,
ಅಡಿಗೆ ಮನೆಗೇ ಮನಸಿರಲಿಲ್ಲ,
ಅವರನ್ನು ಸೇರಿಸಲು!

ಅಮ್ಮನ ಪ್ರೀತಿಗೆ ಜೀವಿಗಳು ಮಾತ್ರವಲ್ಲ,
ಪ್ರತಿ ವಸ್ತುಗಳೂ ತಲೆ ಬಾಗುವವು..
ಅಡಿಗೆ ಕೋಣೆಯ "ಬೆಂಕಿಯ ಒಲೆ" ಕೂಡಾ!!!
@ಪ್ರೇಮ್@

*ಪ್ರೇಮಕ್ಕಾ*

*ಅಡುಗೆ ಮನೆ ಕವನ*

ಅಮ್ಮನ ನೆನಪನ್ನು ಮತ್ತೆ, ಮತ್ತೆ ತರುವ ನಿಮ್ಮ ಅಡುಗೆ ಮನೆ ಕವನ ಸೊಗಸಾಗಿದೆ.. ಅಮ್ಮನಿಲ್ಲದ ಅಡುಗೆ ಮನೆ ಕೂಡ, ಮುಷ್ಕರ ಹೂಡಿದೆ.. ಅದಕ್ಕೂ ಅಮ್ಮನೇ ಬೇಕು..
ಅಮ್ಮನೆಂದರೆ ಹಾಗೇ ತಾನೆ??? ಅಮ್ಮನು ಮಾಡುವ ಅಡುಗೆಯಲ್ಲಿ ಕೇವಲ ಉಪ್ಪು, ಹುಳಿ, ಖಾರ ಮಾತ್ರವಲ್ಲ, ಪ್ರೀತಿ, ವಾತ್ಸಲ್ಯವೂ ತುಂಬಿರುವುದು.. ಯಾರೇ, ಎಷ್ಟೇ ಚೆನ್ನಾಗಿ ಅಡುಗೆ ಮಾಡಿದರೂ ಅಮ್ಮನ ಅಡಿಗೆಯ ಮುಂದೆ, ಅದೆಲ್ಲ ಗೌಣ ಅನಿಸಿಬಿಡುತ್ತದೆ..
ಪ್ರಸ್ತುತ ನಿಮ್ಮ ಕವನದಲ್ಲೂ ಅಡುಗೆ ಮನೆ ಒಂದು ನೆಪವಷ್ಟೇ..ಅದರಲ್ಲಿ ಅಮ್ಮನ ಪ್ರೀತಿಯ ನೆನಪಿದೆ..ಅಮ್ಮನ ವಾತ್ಸಲ್ಯದ ಕುರುಹು ಎದ್ದು ಕಾಣುತ್ತದೆ.. ಅಡುಗೆ ಮನೆಯ ಪ್ರತೀ ವಸ್ತುವಿಗೂ ಕೂಡ, ಅಮ್ಮನ ಸ್ಪರ್ಶವೇ ಹಿತವೆನಿಸಿದೆ.. ಬೇರೆ ಯಾರು, ಯಾರೋ ಅಡುಗೆ ಮಾಡಲು ಬಂದಾಗ ಸಹಕರಿಸುವ ಮನಸ್ಸು ಅಡುಗೆ ಮನೆಗೂ, ಅಲ್ಲಿರುವ ವಸ್ತುಗಳಿಗೂ ಇಲ್ಲ.. ಇದರ ಅರ್ಥ ಅಮ್ಮನ ಗೈರು.. ಅಮ್ಮನ ಪ್ರೀತಿ, ವಾತ್ಸಲ್ಯದ ಗೈರು.. ಅದಕ್ಕಾಗಿ ಯಾವ ಅಡಿಗೆಯೂ ರುಚಿಸುತ್ತಿಲ್ಲ.. ಏನೋ ಕಳೆದುಕೊಂಡ ಭಾವ... ಬಹಳ ಸೊಗಸಾಗಿ ಮೂಡಿದೆ ನಿಮ್ಮ ಅಡುಗೆ ಮನೆ ಕವನ.. ಅಮ್ಮನನ್ನು ಬಿಟ್ಟು ಹೊರಗಡೆ ಎಲ್ಲೋ ಓದುತ್ತಿರುವ ಅಥವಾ ಕೆಲಸ ಮಾಡುತ್ತಿರುವ ನನ್ನಂತ ಎಷ್ಟೋ ಜನರಿಗೆ ಈ ಕವನವನ್ನು ಓದಿದಾಕ್ಷಣ ಅಮ್ಮನ ಅಡುಗೆಯ ನೆನಪು ಬಾರದೇ ಇರಲು ಸಾಧ್ಯವಿಲ್ಲ.. ಒಮ್ಮೆ ಅಮ್ಮನನ್ನು, ಅಮ್ಮನ ಕೈ ಅಡುಗೆಯ ಸವಿಯನ್ನೂ ನೆನಪು ಮಾಡಿದ ನಿಮ್ಮ ಕವನ ನನ್ನ ಮನಸ್ಸನ್ನು ತಟ್ಟಿತು...ಸೂಪರ್👌🏻👌🏻👌🏻👌🏻👌🏻👌🏻😁

ಇನ್ನು ನಿಮ್ಮ ಅಡುಗೆಮನೆಯ ಬಗ್ಗೆ ಒಗ್ಗರಣೆ ಹಾಕುವಂತ ಒಂದೆರಡು ಮಾತುಗಳು..

👉🏻ಕವನದ ಲಯದಲ್ಲಿ ಒಂದು ಹೊಸತನ ಎದ್ದು ಕಾಣುವುದು.. ಭಾವನೆ ಎದ್ದು ಕಾಣುತ್ತದೆ
👉🏻ಪ್ರಾಸಗಳಿಗೆ ಹೆಚ್ಚು ಒತ್ತು ನೀಡದೆ, ಭಾವನೆಗಳಿಗೆ ಒತ್ತು ನೀಡಿ ಬರೆದ ಕವನ ಸೊಗಸಾಗಿದೆ
👉🏻ಸರಳವಾದ ಪದ ಬಳಕೆಯೊಂದಿಗೆ, ಸುಂದರವಾಗಿ ಮೂಡಿದ ಕವನ
👉🏻ಅಡುಗೆ ಮನೆಯನ್ನು ಅಮ್ಮನ ಪ್ರೀತಿಯೊಂದಿಗೆ ಹೋಲಿಸುತ್ತಾ, ಅಮ್ಮ ಇಲ್ಲದೇ ಇದ್ದರೆ, ಆಗುವ ಮಾನಸಿಕ ವೇದನೆಯನ್ನು ಕವನದಲ್ಲಿ ಬಿತ್ತರಿಸಿದ ಪರಿ ಸೊಗಸಾಗಿದೆ..
👉🏻ಅಮ್ಮನ ಗೈರು ಹಾಜರಿಯ ನಷ್ಟವೇನೆಂಬುದು ನಿಮ್ಮ ಕವನದಲ್ಲಿ ಸೊಗಸಾಗಿ ಮೂಡಿದೆ..
👉🏻ಒಟ್ಟಿನಲ್ಲಿ ಅಮ್ಮನ ಮಹತ್ವವನ್ನು ಒಂದು ಹೊಸ ದೃಷ್ಟಿಕೋನದಲ್ಲಿ ಹೇಳುವ ನಿಮ್ಮ ಕವನ ಚೆಂದವಿದೆ..

ಅಲ್ಪ ತಿಳುವಳಿಕೆಗೆ ತೋಚಿದ್ದು ಗೀಚಿರುವೆ..ತಪ್ಪಿದ್ದಲ್ಲಿ ಕ್ಷಮೆಯಿರಲಿ ಅಕ್ಕಾ....

*ಏನೂ ತಿಳಿಯದ ಸಾಹಿತ್ಯ ಶಿಶು*

✍🏻 *ಮನು  ವೈದ್ಯ*



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ