ಭಾನುವಾರ, ಜನವರಿ 13, 2019

706. ಹೀಗೊಂದು ಮಾತುಕತೆ

ಹೀಗೊಂದು ಮಾತುಕತೆ

ಮನೆಯಲ್ಲಿನ ಟಿ.ವಿ ಫ್ರಿಜ್ಜುಗಳು
ಹರಟೆಯಲ್ಲಿ ತೊಡಗಿದ್ದವು.
ಟಿವಿ ಯೊಂದಿಗೆ ಬಟ್ಟೆ ಒಗೆಯುವ ಯಂತ್ರವೂ ಬಂತು!

ಈಗ ಮನೆಯ ಒಡೆಯರು ನಾವೇ!
ಮಕ್ಕಳು ಶಾಲೆಗೆ, ಪೋಷಕರು ಕೆಲಸಕ್ಕೆ!
ಹಿರಿಯರೆಲ್ಲ ಆಶ್ರಮದೆಡೆಗೆ..
ಮುಗುಳುನಗೆ ಬೀರಿದವು ಉಳಿದವು!

"ತಿಂಗಳುಗಟ್ಟಲೆ ನನ್ನೊಳಗೆ ತಂದಿಟ್ಟು
ಮಕ್ಕಳಿಗೂ ಕೊಡದೆ, ತಾವೂ ತಿನ್ನದೆ
ಬಿಸಾಕಿ ಬಿಡುವರು ಮೂರ್ಖರು" ಫ್ರಿಜ್ಜೆಂದಿತು!

ಬಟನ್ ಕಿತ್ಹೋದರೂ, ಬಟ್ಟೆ ಹರಿದ್ಹೋದರೂ ಸರಿ
ನನ್ನೊಳಗೆ ತುರುಕಿ ಮೊಬೈಲ್ ನೋಡುವರು!
ಕೆಲವೊಮ್ಮೆ ಸ್ವಿಚ್ ಹಾಕಲೂ ಮರೆಯುವರು!
ವಾಷಿಂಗ್ ಮಷೀನ್ ರಾಗ ಹಾಡಿತು!

"ನನ್ನ ಮುಂದೆ ಕುಳಿತರೆ ಮುಗಿಯಿತು,
ಒಂದಾದ ಬಳಿಕ ಮೆಘಾ ಸೀರಿಯಲ್"
ರಿಮೋಟಿಗಾಗಿ ಕಚ್ಚಾಟ, ಹೊಡೆದಾಟ
ಊಟ, ತಿಂಡಿಯೂ ನನ್ನೆದುರೇ..
ಟಿ.ವಿ. ಹೆಮ್ಮೆಯಿಂದ ಉಲಿಯಿತು!

ಕಂಪ್ಯೂಟರ್ ಇಷ್ಟೊತ್ತು ಸುಮ್ಮನಿದ್ದು, ಈಗ
"ನೀವೇನೇ ಹೇಳಿ, ನಾನೇ ದೊಡ್ಡಣ್ಣ,
ಪ್ರಪಂಚವೆಲ್ಲಾ ನನ್ನೊಳಗೇ ಇದೆ
ಈಗ ನಿಮ್ಮನ್ನಾರು ಕೇಳರು!"

ಹಬ್ಬದಡುಗೆಯೂ ನನ್ನ ಮೂಲಕವೇ ಆರ್ಡರ್!
ಹೆಣ ಸುಡಲೂ ಆರ್ಡರ್!
ನೀನಾರಿಗಾದೆಯೋ ಎಲೆಮಾನವ!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ