[11/27/2018, 10:42 AM] Wr Manu Vaidya: ಪ್ರೇಮಾ ಮೇಡಂ..
ತರಕಾರಿ ತಿನ್ನಿ ಜಾಣರಾಗಿ...
ವಾವ್.. ಒಂದೊಂದು ತರಕಾರಿಯ ಗುಣ ಮತ್ತು ಮಹತ್ವವನ್ನು ಬಹು ಸರಳ ಸುಂದರವಾಗಿ ಗೀತೆಯೊಳಗೆ ತುಂಬಿದ್ದೀರಾ.. ಒಮ್ಮೆ ತರಕಾರಿ ತೋಟದೊಳಗೆ ಸುತ್ತಾಡಿ ಬಂದಂತಾಯಿತು... ಸೊಗಸಾದ ಗೀತೆ👌🏻👌🏻👌🏻👌🏻👌🏻
-ಮನು ವೈದ್ಯ
[11/27/2018, 11:22 AM] Wr Sham Prasad Bhat: ಪ್ರೇಮ್ ರವರು ತರಕಾರಿ ಜೊತೆ ಧಾನ್ಯ ಬೆರೆಸಿ ಮಾಡಿದ ಕೋಸಂಬರಿ ರುಚಿ ರುಚಿ ಇದೆ..👌🏻👍🏻🙏🏾
[11/28/2018, 3:31 PM] Wr Shivaprasad Aradhya: ಪ್ರೇಮ್ ನಾವು ಅರಳುವ ಹೂಗಳೆಂದು ಸೊಗಸಾಗಿ ಹೇಳಿದ್ದೀರಿ ಮೇಡಂ. ಆದರೆ ತಾವು ಇನ್ನೂ ಚೆನ್ನಾಗಿ ಬರೆಯ ಬೇಕೆಂಬ ಉತ್ಸಾಹ ಇರಲಿ. ಬರೆಯಿರಿ.
ಶಿವ ಪ್ರಸಾದ್ ಆರಾಧ್ಯ ನೆಲಮಂಗಲ
[11/29/2018, 7:33 AM] Nybr Pramila: 🌹🌹🌹🌹🌹🌹
ಪ್ರೇಮ್ ಮೇಡಂ ರವರ ಕಲಿಯಿರಿ.
ಸರಳ ಪದಗಳ ಶಿಶುಗೀತೆ. ಸಣ್ಣದೊಂದು ನೀತಿ ಪಾಠವಿದೆ.
ಪ್ರೇಮಕ್ಕ ನಿಮಗಿನ್ನೂ ಚಂದ ಬರೆಯುವ ಸಾಮರ್ಥ್ಯವಿದೆ, ಬರೆಯಿರಿ, ಓದಿ ಖುಷಿಪಡ್ತೀವಿ...
ಶುಭವಾಗಲಿ
🙏🙏🙏🙏🙏🙏
[11/29/2018, 7:40 AM] Wr Siraj Ahmed Soraba: ಪ್ರೇಮ್ ಸರ್
ಕಲಿಯಿರಿ ಕವನ ಸುಂದರ ಸರಳವಾಗಿ ಬರೆದಿದ್ದೀರಿ ಆಕಾರ ಚಿಕ್ಕದಾಗಿದ್ದರೂ ಎತ್ತರಕ್ಕೇರಬಲ್ಲೆ ಹಾಗೆಯೇ ದಾರದ ಜೊತೆಗಿರುವ ಸಂಬಂಧ ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ ಹಿರಿಯರಿಗೂ ನೀತಿಪಾಠವಿದೆ ಹೃತ್ಪೂರ್ವಕ ಅಭಿನಂದನೆಗಳು
ಯು ಸಿರಾಜ್ ಅಹಮದ್ ಸೊರಬ
[11/29/2018, 8:00 AM] Wr Shivaprasad Aradhya: ಪ್ರೇಮ್ ತಾವು ಬರೆದ ಈ ಶಿಶುಕಾವ್ಯ ಸೂಪರ್ ಹಿಟ್ ಗೀತೆ ಮನೋಹರಭಾವ ಅದೆಷ್ಟು ಚಂದ ಬರಿದಿರುವಿರಿ. ಜೀವನ ಪಾಠವ ಅದಿರಲಿ ಇಟ್ಟು. ವಾವ್ ವಾವ್ ಪದಗಳಲ್ಲಿರುವ ಭಾವ ಲಹರಿ ಚೆನ್ನಾಗಿದೆ.
ಶಿವ ಪ್ರಸಾದ್ ಆರಾಧ್ಯ ನೆಲಮಂಗಲ
[11/29/2018, 9:19 AM] Wr Sham Prasad Bhat: ಪ್ರೇಮ್..ಅಟ್ಟ ಹತ್ತಿದ ಮೇಲೆ ಏಣಿ ಮರೆಯಬೇಡ ಎಂಬ ಸಂದೇಶ ಹೊತ್ತ ಚಿಕ್ಕ ಚೊಕ್ಕ ಶಿಶುಗೀತೆ ಮೆಚ್ಚುಗೆ ಆಯ್ತು🙏🏾👌🏻👍🏻
[11/29/2018, 10:48 AM] Wr Shamily Praveen Bedra: ಪ್ರೇಮ್ ರ ಕಲಿಯಿರಿ ಯಲ್ಲಿ ಮಗುವಿಗೆ ಗಾಳಿಪಟ ತನ್ನ ಜೀವನಗಾಥೆಯನ್ನು ಮುಗ್ಫ್ಧವಾಗಿ ವಿವರಿಸುತ್ತಿದೆ.. ಸರಳ ಮತ್ತು ಸುಂದರ👌👌👌👏👏
[11/29/2018, 11:15 AM] Wr Ajith: @ಪ್ರೇಂ ಮೇಡಂ.....
*ಕಲಿಯಿರಿ*
ಅಬ್ಬಬ್ಬಾ ಎನ್ನುವಂತಿತ್ತು ಕೊನೆಯ ಎರಡು ಸಾಲುಗಳು.....
ಗೆಳೆತನ ಮನೆಯವರ ಪ್ರೀತಿ... ಅದೆಷ್ಟು ಚನ್ದ ಇರುತ್ತೆ ಅದರಿಂದ ನಾವು ಹೇಗೆ ಬದುಕಬಲ್ಲೆವು ಆಗ ನಾವು ಏನನ್ನು ಸಾಧಿಸಬಲ್ಲೆವು ಎಂಬುದನ್ನು ನಾವು ತಿಳಿದುಕೊಳ್ಳಬಹುದು...
ಯಾವುದು ಕೀಳಲ್ಲ...
ಯಾವುದು ಶ್ರೇಷ್ಠವಲ್ಲ ಎಂಬುದನ್ನು ತಿಳಿಯಬೇಕು...
ವೆಸ್ಟ್ ಎಂದು ಬಿಸಾಕುವ ಕಾಗದ ನಾಳೆಯ ದಿನ ನಮಗೆ ಬಹಳ ಉಪಯುಕ್ತ.. ಬಿಟ್ಟ ಕಾಗದವನ್ನು ತಲೆ ಎತ್ತಿ ಅಕಾಶದೆತ್ತರಕ್ಕೆ ನೋಡಿದಾಗ ಆಗುವ ಆನಂದ ಅಷ್ಟಿಷ್ಟಲ್ಲ...
ಅದು ನಮ್ಮನ್ನೇ ಬದಲಿಸುವಂತಹದ್ದು.....
ಕೊಳಚೆ ನೀರು ಸಹ ಬೆಂಕಿಯನ್ನು ಅರಿಸಬಲ್ಲದ್ದು.. ಎಂದುದು ಅಷ್ಟೇ ಸತ್ಯ..
ಕಷ್ಟ ಪಟ್ಟರೆ ಎನಿಲ್ಲೆ ಮಾಡಬಹುದು...ಹೇಗೆಲ್ಲ ಬದುಕಬಹುದು ಎಂಬುದನ್ನು ಬಹಳ ಸುಂದರವಾಗಿ ಬರೆದಿದ್ದಿರ.....
ಬಾನಿನೆತ್ತರಕ್ಕೆ ನೀನಿರು ಎಂದು ಹೇಳಿದ್ದು...
ಚನ್ದ ಇದೆ..
😊😊
[12/1/2018, 7:20 AM] Wr Sham Prasad Bhat: *ಪ್ರೇಮ್ ರವರ ಬಾರೋ ಕೃಷ್ಣ* ಸೊಗಸಾದ ಗೀತೆ....
ಬೆರಳು ನಲಿಯಲು ಉಲಿವ ಕೊಳಲಲಿ ಸ್ವಾಭಿಮಾನದ ಸರಿಗಮ......
ಏರು ಇಳಿತದ ಸಪ್ತ ಸ್ವರದಲಿ ಸಾಮರಸ್ಯದ ಸಂಗಮ..........
ಮೇಲು,ಕೀಳು, ಮತಭೇದವ ಮರೆತು ಬನ್ನಿರೆಲ್ಲಾ..ಕೊಳಕಗಾನ ಸವಿಯುವ...ಬಹಳ ಅರ್ಥಪೂರ್ಣ ಸಾಲುಗಳು..ಮುಂಜಾನೆ ಒಳ್ಳೆಯ ಶಿಶುಗೀತೆ ಓದಿದ ತೃಪ್ತಿ..👌🏻👍🏻🙏🏾
[12/1/2018, 7:33 AM] Wr Ajith: @ಪ್ರೇಮ್ ಮೇಡಂ.....
*ಬಾರೋ ಕೃಷ್ಣ*
ಬಾರೋ ಕೃಷ್ಣ ಎಂಬ ಬಾಲಕನ ಬಗ್ಗೆ ಅದೆಷ್ಟು ಬರೆದರು ಸಾಲದು, ಅವನ ಮಹಿಮೆ ಜಗತ್ತಿಗೆ ತಿಳಿದಂತೆ ಇರುತ್ತದೆ. ಅವನ ಆಟವನ್ನು ಬಹಳ ಚಂದದಾಗಿ ಬರೆದಿದ್ದಿರ..!
*ಕೃಷ್ಣ ಎಂದರೆ ಅಷ್ಟಿಷ್ಟಲ್ಲ.... ಅವನೆಂದರೆ ಈ ಜಗತ್ತು*
ತುಂಟಾಟದ ತುಂಟನ ಬಗ್ಗೆ ಓದಲು ಅದೆ ಬಲು ಚಂದ...
ಬೆಣ್ಣೆಯ ಕಡಿಯುವ ತುಂಟ, ಅವನೇ ಈ ಜಗದ ಭಂಟ... ಗುಡ್ಡದ ಕೆಳಗೆ ನಿಂತು ಗೋವರ್ಧನಕಾರ ಎನಿಸಿಕೊಂಡವ.
ಕೊಳಲ ನಾದಕ್ಕೆ ಜೀವ ಪ್ರಪಂಚವೆ ತಲೆ ದುಗುವಂತೆ, ಒಣಗಿದ ಹುಲ್ಲು ಕಡ್ಡಿಯೇ ಕುಣಿಯುವಂತೆ ನಾದ ಹೊಮ್ಮಿಸುವ ಬ್ರಹ್ಮಣೇ....
ಗೋವಿನ ಹಾಲು ಕುಡಿದು... ಬೆಣ್ಣೆ ಕಳ್ಳ ಎಂಬ ಹೆಸರಿಗೆ ಪಾತ್ರನಾದ ಚಕೋರ ನೀನು... ಸಾಗಿದೆ ನಿನ್ನ ಕತೆಯೂ ಈ ಶೃಷ್ಟಿ ಇರುವವರೆಗೆ...
ಆಟದಲ್ಲಿ ಬೇಧವಿಲ್ಲ ಜಾವುದೇ ಜಾತಿ,ಮತಗಳಿಲ್ಲ... ನಿನ್ನ ನಿಷ್ಕಲ್ಮಶ ಮನಸ್ಸೊಂದೆ ಸ್ಫೂರ್ತಿಯ ನೆಲೆಯಂತ ಸ್ನೇಹ....
*ಕೃಷ್ಟನ ಬಗ್ಗೆ ಬರೆದ ಕವಿತೆ ನಿಜಕ್ಕೂ ಮಕ್ಕಳಿಗೆ ಹೇಳಿ ನಲಿಯುವಂತದ್ದು*....
*ಚುಪರ್*😊😊
[12/4/2018, 1:58 PM] Wr Saroja Thigdolli: ಪ್ರೇಮ ಸರ್ ಅವರ
ಅಳು
ಪ್ರಿಯತಮನ ನೆನಪಿನಲ್ಲಿ ಪ್ರಿಯತಮೆ ಕೊರಗಿ ಸೊರಗಿ ಹೋದ ವಿಷಯವನ್ನು ಸುಂದರವಾಗಿ ವ್ಯಕ್ತಪಡಿಸಿದ್ದಾರೆ ಸೂಪರ್ ತುಂಬಾ ಚೆನ್ನಾಗಿ ಮೂಡಿಬಂದಿದೆ
👌👌👌👏👏👏👏
[12/4/2018, 3:23 PM] Wr Ajith: @ಪ್ರೇಮ ಮೇಡಂ......
*ಅಳು*
ಅಬ್ಬಾ ಪ್ರೀತಿ ಇಲ್ಲಿ ತುಂಬಿತು ಅದು ಜಾರಿ ಜಾರಿ ಕಣ್ಣೀರಾಗಿ ಬೀಳುತ್ತಿತ್ತು.....
*ಮಳೆಯಲಿ ಕಣ್ಣಿರು ಯಾವುದು..?* ಎಂದು ತಿಳಿದುಕೊಳ್ಳುವ ಬಗೆ ಬಹಳ ಸುಂದರವಾದದ್ದು....
ಪ್ರೀತಿ ಅಂದ್ರೇನೇ ಇಷ್ಟೇ.... *ಒಬ್ಬರಿಗೊಬ್ಬರು ಪ್ರೀತಿಯಿಂದ ಬಾಳುವುದಕ್ಕಿಂತ ಕಣ್ಣಿರನ್ನೇ ಹೊತ್ತು ಬಾಳುವಂತದ್ದು*...
ಅಯ್ಯೋ ಕಣ್ಣೆಯೊಬ್ಬಳು ಇಲ್ಲಿ ನಲ್ಲನ ನೆನಪಲ್ಲಿ ಬಾಡಿದಳು....
ಅದೆಂತ ನೆನಪಿತ್ತೋ ನಾ ಅಂತೂ ಕಾನೇನು.... ಅದೆಷ್ಟು ಪ್ರೀತಿಯಿಂದ ಅವನ ಬರುವಿಕೆಗಾಗಿ ಕಾದು ಕುತಿದ್ದಳೊ ಆ ಬಾಲೆ...
*ಯಾವ ಭಾವದಲ್ಲಿ ಯಾರ ಕಣ್ಣಿರು ಎಂದು ಹೇಳಬಲ್ಲೆ ನಾನು ಇಂತ ಜೋರಾದ ಮಳೆಯಲ್ಲಿ*
ಎಷ್ಟು ಅತ್ತರೇನು ಪ್ರಯೋಜನ..?
ಎಷ್ಟೋ ಪ್ರೇಮಿಗಳ ಪಾಡು ಇದು....
ಇದುವೇ ನಿಯಮವು ಆದಂತಾಗಿದೆ....
ಎಲ್ಲಿಗೆ ಬಂತು ಪ್ರೀತಿ..?
ಯಾತಕ್ಕೆ ಬಂತು ಪ್ರೀತಿ..?
*ಕಣ್ಣಿರ ಹರಿವಿಕೆಯ ನೋಡಲೆಂದು* ಇರಬಹುದು...
ನಲ್ಲೆಯೂ ಇಲ್ಲಿ ನಲ್ಲನ ಪ್ರೀತಿಗಾಗಿ ಬಾಡಿ ಹೋದಳು....
ಗಟ್ಟಿತನದ ಪ್ರೀತಿ..
*ಚುಪರ್* 😊😊
[12/13/2018, 7:44 PM] Wr Vani Bhandari: *ನಮಸ್ತೇ*
🙏🏻🙏🏻🙏🏻🙏🏻
*ಪ್ರೇಮ್ ಅವರ ಮನುಜಾ*
*ಸಾಮಾಜಿಕ ಕಳಕಳಿಯಿಂದ ಮುಂದಿನ ಯುವಪೀಳಿಗೆಯ ಕುರಿತಾಗಿ ಹೊರಟ ರಾಮಬಾಣ*
ಬಹುಶಃ ಈ ಒಂದು ಚಿಂತನೆ ಎಲ್ಲಾರೂ ಕೇಳಿಕೊಳ್ಳಲೇಬೇಕಾದ ಅಂಶ ಎನಿಸುವುದು,, ಕಾರಣ ಮನುಷ್ಯನ ದುರಾಸೆಗೆ ಮಿತಿಯೆ ಇಲ್ಲದೆ ಪ್ರಾಣಿ ಪಕ್ಷಿಸಂಕುಲಗಳು ಇಂದು ಅವಸಾನದ ಹಂತಕ್ಕೆ ಬಂದಿವೆ ,, ಈ ರೋದನೆ ಕೇವಲ ಅರಣ್ಯ ರೋದನೆಯಾಗಿದೆಯೇ ವಿನಾಃ,,, ಕಾರ್ಯರೂಪಕ್ಕೆ ಬಂದಿಲ್ಲ,,
ಎಲ್ಲಿಯ ತನಕ ಮಾನವ ಜೀವಯ ಲಾಲಾಸೆಯ ದುರಾಸೆ ಗೂಡೆಯೊಳಗೆ ಮಲಗಲು ಇಚ್ಚೆ ಪಡುವನೋ ಅಲ್ಲಿಯವರೆಗೆ ಈ ನೋವು ಸಂಕಟ ತಪ್ಪಿದಲ್ಲ,,
ಅವನು ಇಂದು ಮಾಡಿದ ತಪ್ಪಿಗೆ ಮುಂದಿನ ಸಂತತಿಯೆ ವಿನಾಶ ಪಡುವ ಶೋಚನೀಯ ಸ್ಥಿತಿ ನಮಗೆ ಈಗಲೇ ಕಾಣುವುದು,,,, ಸುಂದರ ಕವನ.
ಉಳಿದಂತೆ,,
👉ಪರಿಸರ ಕಾಳಜಿ ಹೊತ್ತ ನಿಂತ ಕವನ,,
👉ಸದಾಶಯದಲ್ಲಿ ಒಳಿತನ್ನು ಹೇಳುವಂತಿದೆ ಕವನದ ಸಾಲುಗಳು,,
👉ವಾಸ್ತವಾಂಶಕ್ಕೆ ತೆರೆದ ಕನ್ನಡಿ,,
👉ಚಂದವಾಗಿ ಎಲ್ಲಾ ಪ್ರಕಾರದಲ್ಲಿ ತಮ್ಮ ಕೈಚಳಕ ತೋರುವ ನಿಮಗೆ ಶುಭವಾಗಲಿ ಜಿ,,,
*ಧನ್ಯವಾದಗಳೊಂದಿಗೆ*
✍ *ವಾಣಿ ಭಂಡಾರಿ*
[12/14/2018, 7:36 AM] Nybr Pramila: *ನಮಸ್ತೆ ಪ್ರೇಮ ಮೇಡಂ...*.
*ಸತ್ಯ ಸಾಯಲಿ ಮರವುರುಳಿ ಬೀಳಲಿ*
*ನಿತ್ಯ ನರಕದಿ ಬಾಳುವ ಪಿಳ್ಳೆಗಳು ಸಾಯಲಿ*
*ಕನಸುಗಳು ಸಾವಿರವಿಹವು* *ನನಸಾಗಿಸುವ ಛಲವಿದೆ*
*ಆತ್ಮವಿಶ್ವಾಸವಿರದಿರೂ ದುಡ್ಡಿದೆ, ನಾನು ಬದುಕಬೇಕಿದೆ....*
ಅಬ್ಬಾ ಶಿವನೇ... ಇಷ್ಟೊಂದು ಸ್ವಾರ್ಥನ????? ಸತ್ತವ ಸಾಯಲಿ ಅನ್ನೋ ಪದದಲ್ಲೇ ಕರುಣೆ ,ದಯ ,ದಾಕ್ಷಿಣ್ಯಗಳು ನರಳಿ ಒದ್ದಾಡುತ್ತಿರುವ ಹಾಗಿದೆ... ಹಣವೊಂದಿದ್ದ ಮಾತ್ರಕ್ಕೆ ಏನೋ ಕಡಿದು ಗುಡ್ಡ ಹಾಕ್ತೇನೆ ಅನ್ನೋದು, ಆತ್ಮವಿಶ್ವಾಸ ಅಲ್ಲ.. ಭಂಡ ಧೈರ್ಯ.. ಮೂಢತನ ಅಂತಾರಲ್ಲ ಹಾಗೆ.. ಅಂತಹ ಬದುಕು ಪ್ರಾಣಿಗಳ ಬದುಕಿಗಿಂತಲೂ ಕೆಳಮಟ್ಟದ್ದು
.
*ಅತಿಚಿಕ್ಕ ಪ್ರಾಣಿಯದು ಬದುಕಿಯೇನು ಫಲ*
*ಮನುಜಗಲ್ಲದೆ ಇಳೆ ಸುಖಿಸಲೇನು ಛಲ.*
*ನಿನ್ನಂತೆ ನಾನೆನುವರು ಅದು ಹೇಗೆ ಸಾಧ್ಯವಿದೆ?*
*ಸಿರಿವಂತ ನಾನು ಐಶಾರಾಮಿಯಾಗಿ ಬದುಕಬೇಕಿದೆ..*
ನಾನು...ನಾನು ಮಾತ್ರ ಬದುಕಬೇಕು ಎಂಬ ಸ್ವಾರ್ಥದ ಮುಂದೆ ಯಾರೂ ಕಣ್ಣಿಗೆ ಕಾಣಿಸುವುದಿಲ್ಲ. ಐಶಾರಾಮಿಯಾಗಿ ಬದುಕಬೇಕು ಎಂಬ ಯೋಚನೆ ಅವನ ಅಧಃಪತನದ ಮುನ್ಸೂಚನೆಯಾಗಿದೆ.
*ನೀತಿ ನಿಯಮ ಒಲವು ಪ್ರೀತಿ ನಂಬಿಕೆ ಬರಿಯ ಮಾತುಗಳು*
*ಇದ ನಂಬಿ ನಡೆದರೆ ಬೀಳುವವು ಬಾಳಿಗೆ ತೂತುಗಳು*
*ಬಾಳು ಬೆಳಗಿ ಆನಂದಿಸಲು ನೋಟುಗಳು ಬೇಕಾಗಿವೆ..*
*ಜಾಗ ಬದಲಿಸಿ ನನ್ನ ತಡೆಯಬೇಡಿರಿ ನಾ ಬದುಕ ಬೇಕಿದೆ...*
ಮೇಡಂ.. ಇದು ಹೇಗೆ ಸಾಧ್ಯ...? ನೀತಿ ನಿಯಮ ಒಲವು ಪ್ರೀತಿಯಿಂದ ಬದುಕಿದರೆ ಬದುಕು ಖಂಡಿತವಾಗಿಯೂ ತೂತು ಬೀಳಲು ಸಾಧ್ಯವೇ ಇಲ್ಲ.
ಬಾಳು ಬೆಳಗಿಸಲು ನೋಟುಗಳು ಬೇಕಾಗಿಲ್ಲ. ಮನಸಲ್ಲಿ ನಿಜವಾದ ಪ್ರೀತಿ ಸ್ನೇಹದ, ದಯ ಕರುಣೆಯ ಭಾವ, ಸಚ್ಚಾರಿತ್ರ್ಯ ಇದ್ದರೆ ಸಾಕು, ಯಾವ ನೋಟುಗಳೂ ಬೇಡ.. ಬದುಕು ಬಂಗಾರವಾಗಲೇಬೇಕು ಅನ್ನೋದು ನನ್ನ ಅಭಿಪ್ರಾಯ
ಚಂದದ ಕವನ.. ಆದರೆ ಏನೋ ಹೇಳಲು ಹೋಗಿ ಮತ್ತೇನೋ ಹೇಳಿದಂತಾಗಿದೆ. .
ನನಗನಿಸಿದ್ದು.. ಕವಿಭಾವಕ್ಕೆ ದಕ್ಕೆ ತಂದಿಟ್ಟರೆ ಕ್ಷಮಿಸಿಬಿಡಿ.
ಶುಭವಾಗಲಿ.. 💐💐💐💐
[12/14/2018, 10:16 AM] Wr Sham Prasad Bhat: *ಪ್ರೇಮ್ ಸಹೋದರಿ* ಧನ,ಕನಕ ,ಆಸ್ತಿ,ಅಂತಸ್ತುಗಳನ್ನು ವೈಭವೀಕರಿಸುತ್ತಾ ಸಾಗಿದ ನಿಮ್ಮ ಕವನ ಕೊನೆಯಲ್ಲಿ ತಿರುವು ಪಡೆಯಿತು..ಇದು ಧನಾತ್ಮಕ ಅಂಶ..ಭೂಮಿ ತಟಸ್ಥವಾದರೆ ಏನಾಗಬಹುದು? ಸೂರ್ಯನ ಚಟುವಟಿಕೆ ಸ್ಥಗಿತಗೊಂಡರೆ......ಚಿಂತನೆಗೆ ಹಚ್ಚುವ ಸಾಲುಗಳು..ವಾವ್ಹ್ ಸೊಗಸಾಗಿದೆ ಕವನ🙏🏾👍🏻👌🏻
[12/14/2018, 11:34 AM] +91 99801 78424: ಪ್ರೇಮ ರವರ
ಕವನವು ಸಹಾ ಅವರು ಅಂದು ಕೊಂಡಂತೆ ಎಲ್ಲರ ಮೆಚ್ಚುಗೆಯ ಪಡೆದು ಮೊದಲ ಸ್ಥಾನವನ್ನು ಪಡೆದು ನಾ ಮೊದಲಿಗ ನಾಗಬೇಕು ಎನ್ನುವಂತಿದೆ.
ಬದುಕಿನ ಎಲ್ಲಾ ಜಂಜಾಟದಿಂದ ಜಯಗಳಿಸಿ ನಾ ಬದುಕಲೇ ಬೇಕು ಎನ್ನುವ ಇವರ ಹಂಬಲ ತುಂಬಾ ಮೆಚ್ಚುಗೆ ಯಾಗುತ್ತದೆ.
ಅರುಣಕುಮಾರ ನರಗುಂದ
[12/15/2018, 9:46 AM] Wr Saroja Thigdolli: ಪ್ರೇಮ್ ಸರ್ ಅವರು
ಎಲ್ಲರೂ ಒಂದೇ
ಜನಪದ ಶೈಲಿಯಲ್ಲಿ ಮೂಡಿ ಬಂದ ಈ ಕವಿತೆ ಎಲ್ಲರ ಮನ ಮುಟ್ಟುವಂತಹದ್ದು
ಸುಂದರ ಕಲ್ಪನೆಯಲ್ಲಿ ವಿಜೃಂಭಿಸಿದೆ
ಕವಿಗೆ ಇಲ್ಲಿ ಹೊರಜಗತ್ತಿನಲ್ಲಿ ಕಂಡಂತಹ ಜಾತಿ ಭೇದ ದ್ವೇಷ ಮತ್ಸರ ಅಸೂಯೆ ಸ್ವಾರ್ಥ ಕೆಡುಕು ಎಲ್ಲವನ್ನ ಕಂಡು ತಾಯಿ ಗರ್ಭ ವೆ ಶ್ರೇಷ್ಠ ಅನಿಸಿದೆ
ಒಂಬತ್ತು ತಿಂಗಳು ಅಂಧಕಾರದಲ್ಲಿ ಇದ್ದರೂ ಆ ಸಾಮ್ರಾಜ್ಯ ಸ್ವರ್ಗವಾಗಿತ್ತು
90 ವರ್ಷ ಬದುಕಿದ ಬದುಕಿನಲ್ಲಿ ಅನ್ಯಾಯಗಳನ್ನು ಕಂಡ ಕವಿ ನಲುಗಿ ಹೋಗಿ ಮತ್ತೆ ತಾಯಿ ಗರ್ಭದಲ್ಲಿ ಇದ್ದರೆ ಚೆನ್ನಾಗಿತ್ತು ಎಂಬ ಆಶಯವನ್ನು ವ್ಯಕ್ತ ಪಡಿಸಿದ್ದಾರೆ
ಒಟ್ಟಾರೆ ಕವಿತೆ ವಿಶಿಷ್ಟ ಭಾಷಾ ಶೈಲಿಯಲ್ಲಿ ಸುಂದರವಾಗಿ ಮನಸ್ಸಿಗೆ ಮುದ ನೀಡುವಂತೆ ಮೂಡಿಬಂದಿದೆ
ಧನ್ಯವಾದಗಳು
👏👏👏👏👏
ಕವಿ ಭಾವಕ್ಕೆ ಧಕ್ಕೆಯಾದರೆ ಕ್ಷಮೆ ಇರಲಿ
[12/15/2018, 7:03 PM] Wr Uday Bhaskar Sullia: ಪ್ರೇಮ್ ಮೇಡಂ
ವಾವ್ ತುಂಬಾ ಅರ್ಥಪೂರ್ಣ ಕವನ, ಗರ್ಭದೊಳಗೆ ಕತ್ತಲ ಕೂಪದಲ್ಲಿ ಕುಳಿತಿದ್ದರೂ ಯಾವ ಚಿಂತೆಯೂ ಇರಲಿಲ್ಲ. ಹೊರಗೆ ಬಂದಾಗ ಮೇಲುಕೀಳು ಜಾತಿಮತಗಳ ತಾರತಮ್ಯದಿಂದ ಮನಸ್ಸೇ
ಹದಗೆಟ್ಟು ಹೋಗುತ್ತದೆ. ಎಲ್ಲವನ್ನೂ ಚೆನ್ನಾಗಿ ವಿವರಿಸಿದ್ದೀರಿ. ನಿಮ್ಮ ಭಾಷೆಯ ಶೈಲಿಯಲ್ಲೂ ಬದಲಾವಣೆ ಕಂಡೆ👌👌
[12/17/2018, 7:32 PM] Wr Shivaprasad Aradhya: ಭಾವಬಳ್ಳಿಯ ಹಬ್ಬಿಸಿರುವ ಪ್ರೇಮರವರೆ ನಿಜಕ್ಕೂ ಪ್ರೇಮಮಯಿ,ವಾತ್ಸಲ್ಯಮಯಿಯಾಗಿ ಹರಡಿದ ತಮ್ಮ ಸರಳ ,ಸುಂದರವಾಗಿ ಭಾವಗಳನ್ನು ನಿರೂಪಿಸುವ ಮೂಲಕ ಗೆದ್ದಿರಿ.ಚಂಧದ ಸಂದೇಶ ರವಾನೆ ಮಾಡುವ ಮೂಲಕ ತಮ್ಮ ಕವನ ಸೂಪರ್.
ಶಿವಪ್ರಸಾದ್ ಆರಾಧ್ಯ ನೆಲಮಂಗಲ
[12/19/2018, 2:24 PM] Wr Siddesh: *ಪ್ರೇಮ್ ಅವರ ಬರಬಾರದೇ ....*
*ಬದುಕೇ ಬಂಗಾರ .... ನಿನ್ನಾಗಮನದಿ .....* ಬಂದು ಬಿಡು ನೀ ನನ್ನೆಡೆಗೆ ....
ಕಾದಿಹೆ ನಿನಗೆ ದಿನವಿಡೀ ಮನದ ದಣಿವನ್ನ ಮರೆತು ....
ಸುಂದರ ಸಾಲುಗಳ ಅನಾವರಣ .....
ಪ್ರೇಮ್ ಮೆಡಮ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ