ಶನಿವಾರ, ಜನವರಿ 12, 2019

701. ವಿವೇಕನಿಗೆ ಕರೆ

ವಿವೇಕನಿಗೆ ಕರೆ

ಮೊಬೈಲ್ ನಲ್ಲಿ ಮುಳುಗಿ ಹೋಗಿರುವ
ಯುವಕರ ಕುಟ್ಟಿ ಎಬ್ಬಿಸಬೇಕಿದೆ,
ವಾಟ್ಸಪ್ಪು, ಯೂಟ್ಯೂಬ್, ಮುಖಪುಟಗಳ ಜೊತೆಗೆ
ಅನ್ವೇಷಣೆ, ಕೆಲಸ ಸಾಗಬೇಕಿದೆ!
ಬಾ ವಿವೇಕ ಮತ್ತೊಮ್ಮೆ!
ಎಬ್ಬಿಸು ಜನರ ಮಗದೊಮ್ಮೆ!

ಸಹಾಯಹಸ್ತ ನೀಡುವುದ ಕಲಿಸಬೇಕಿದೆ,
ಧರ್ಮದ ಬೋಧನೆ ಅರುಹಬೇಕಿದೆ,
ವಿದ್ಯೆಯ ಮಹತ್ವ ತಿಳಿಸಬೇಕಿದೆ
ಬಾ ನರೇಂದ್ರ ತಿರುತಿರುಗಿ
ಜನ ಸಾಯುತಿಹರು ಮರುಮರುಗಿ!

ಜಾತಿ-ಮತಗಳ ಕಂದಕವ ಅಳಿಸ ಬೇಕಿದೆ
ನೋವಿನೆದೆಗಳಲಿ ನಲಿವಿನ ಕವನಗಳ ಕಟ್ಟಬೇಕಿದೆ
ಮನಗಳ ತುಂಬಾ ಸಹಬಾಳ್ವೆಯ ದೀಪ ಬೆಳಗಬೇಕಿದೆ
ಬಾರೆಯಾ ಸ್ವಾಮೀ ನೀ
ಹೃದಯಗಳ ಜೋಡಿಸಲು..

ಕದ ಮುಚ್ಚಿದ ಕಣ್ಗಳ ತೆರೆಯಬೇಕಿದೆ
ಮರೆಯಾಗಿರುವ ಹವ್ಯಾಸಗಳ ಬೆಳೆಸಬೇಕಿದೆ
ದೇವರ ಬಗೆಗಿನ ಭಕ್ತಿ ಗೌರವ ಹೆಚ್ಚಿಸಬೇಕಿದೆ
ಸಂಸ್ಕೃತಿಯನು ಎಲ್ಲರಲಿ ಉಳಿಸಬೇಕಿದೆ..
ಬಾ ವಿವೇಕಾ ಭಾರತದ ಉನ್ನತಿ ಪ್ರಪಂಚಕೆ ಸಾರಬೇಕಿದೆ..

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ