ಜಂಗಮ ಗಂಟೆ(ಮೊಬೈಲ್)
ನಾ ನಿನ್ನ ಸೂಜಿಗಲ್ಲಿನ ಸೆಳೆತಕ್ಕೆ
ಮರುಳಾಗಿಹೆನಲ್ಲ ಚೆಲುವೆ!
ವಾಚು ಬಿಟ್ಟಿರುವೆ!
ಡೈರಿ ಬಿಟ್ಟಿರುವೆ!
ಬರೆಯುವುದು, ಓದುವುದ ಬಿಟ್ಟು,
ನಿನ್ನನೊತ್ತುತಲೆ ಇರುವೆ!
ನಾನೇಕೆ ಹೀಗಾದೆ?
ಮುಂದೆ ಮುಂದೆ ಓಡುತ್ತಿದ್ದವ,
ಮೂಲೆ ಸೇರುತಲಿರುವೆ,
ಗೆಳೆಯರೊಡನೆ ಮಾತು ಮರೆತು
ಸಂದೇಶಗಳ ಮೊರೆ ಹೋಗುತಲಿರುವೆ!
ದೂರದ ಗೆಳೆಯರೆನಗೆ,
ತಿಳಿದಿಲ್ಲ ಪಕ್ಕದ ಮನೆಯವನ ಬಗ್ಗೆ!
ಮೊನ್ನೆ ಕೆಳಗೆ ಮನೆಯಜ್ಜಿ
ಪ್ರಾಣ ಕಳಕೊಂಡರಂತೆ
ನಿನ್ನೆ ಮುಖಪುಟದಲ್ಲೋದಿದೆ..!!
ಪುಸ್ತಕ ದೂರವಾಗಿದೆ ಈಗ!
ವಾಟ್ಸಪ್ಪು, ಮುಖಪುಟ, ಮೆಸೆಂಜರ್
ನನ್ನ ನಿತ್ಯ ಬಳಕೆಯ ಪದಗಳು!
ಅದೇನು ಸೆಳೆತ ನಿನ್ನಲಿ!
ಮಕ್ಕಳು ಹಾಳಾಗುತ್ತಾರೆನುತ
ಹಿರಿಯರೇ ಹಾಳಾಗಿಹರು!
ಸಮಯವೆಲ್ಲ ಯೂಟ್ಯೂಬ್, ಗೂಗಲ್ಗೆ!
ಸಂಬಂಧ, ಕುಟುಂಬವೆಲ್ಲ ಅದರಲ್ಲೆ!
ಕಂಡು ಹಿಡಿದವ ಬಳಸೋಲ್ಲ!
ಹೊಸ ಸಂಶೋಧನೆಯಲಿ ಮಗ್ನನವ!
ಸಮಯವಿರಬೇಕೆಂದಿಲ್ಲ,
ಇರುವ ಸಮಯ ನಿನಗಾಗೆ ಮೀಸಲು "ರಾಣಿ!"
ನೀ ಜಂಗಮ "ವಾಣಿ"!!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ