ಶುಕ್ರವಾರ, ಜನವರಿ 11, 2019

692.ಹಿಂಗಾಗ್ಬುಟ್ರಲ್ಲೋ

ಹಿಂಗಾಗ್ಬುಟ್ರಲ್ಲೋ...

ಹಿಂಗಾಡ್ತವ್ರಲ್ಲೋ ಜನಾ..
ಹೊಂಡದೊಳಗ್ ಬಿದ್ದಿದ್ರೂನು
ಎತ್ತಾಕ್ ಬರಲೊಲ್ರು..
ಬದ್ಲಾಗಿ ಸೆಲ್ಫೀನ ತೆಗ್ದೂ
ಕಳ್ಸಾಕತ್ಯಾರಲ್ಲೋ ತಮ್ಮ..

ಹಿಂಗಾಡ್ತಾವ್ರಲ್ಲೋ ಜನಾ...
ತಮ್ ಬಟ್ಟೆ ಸೀರೆ, ಪಂಚೇಯ ಮರ್ತು
ತುಂಡ್ ತುಂಡೇ ಉಡ್ತಾರಲ್ಲೋ
ಮಾನ ಮರ್ವಾದೆ ಬಿಟ್ಟಾವ್ರಲ್ಲೋ..

ಹಿಂಗಾಡ್ತವ್ರಲ್ಲೋ ಜನಾ...
ತಮ್ ಅಚ್ಚ್ ಗನ್ನಡ ಭಾಷೆ ಮರ್ತು
ಪರಂಗಿಯವ್ರ ಭಾಷೆ ಕಲ್ತು
ಇಂಗ್ಲೀಸೇ ಬೇಕಂತಾವ್ರಲ್ಲೋ
ಕನ್ನಡ ನಮ್ಗೆ ಯಾಕಂತಾವ್ರಲ್ಲೋ...

ಹಿಂಗಾಡ್ತವ್ರಲ್ಲೋ ಜನಾ..
ನಂ ಶಾಸನಾವ ಮರ್ತು
ಪರರಿಗೆ ಸಾಯಾ ಮಾಡ್ದೆ
ಬದ್ಕಾಕೂ ಬಿಡಲೊಲ್ರಲ್ಲೋ ತಮ್ಮಾ..
ಸತ್ರೂನು ಬರಲೊಲ್ರಲ್ಲೋ...

ಹಿಂಗಾಡ್ತಾವ್ರಲ್ಲೋ ಜನಾ..
ತಾವ್ ತಿನ್ನೋ ಊಟದೊಳಗ,
ತಾವ್ ಕುಡ್ಯೋ ನೀರಿನೊಳ್ಗ
ತಾವೇ ವಿಷಾನ ಸುರಿತಾವ್ರಲ್ಲಣ್ಣೋ...
ಮುಂದೆ ಜೀವ್ನ ಹೇಗಣ್ಣೋ...

ಹಿಂಗಾಡ್ತಾವ್ರಲ್ಲೋ ಜನಾ..
ತಮ್ ಮಕ್ಳಿಗೆ ವಿಷವ ತಿನ್ಸಿ
ತಾವ್ ಬೆಳೆದಿದ್ ಮಾರಿ ಮುಗ್ಸಿ
ತಮ್ಮನ್ನೇ ಕೊಂದ್ಕೋತಾವ್ರಲ್ಲೋ ತಮ್ಮಾ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ