ಅಜ್ಜ
ಆಚೆ ಮನೆಯ ಹಿರಿಯ ಅಜ್ಜ
ಸದಾ ಜೋರು ಕೆಮ್ಮು ತ್ತಿದ್ದ//
ಕೋಲು ಹಿಡಿದು ನಡೆಯುತಿದ್ದ
ನಡೆಯುವಾಗ ವಾಲುತ್ತಿದ್ದ//
ಮೊಮ್ಮಕ್ಕಳ ನಗಿಸುತಿದ್ದ
ಮರಿಮಕ್ಕಳ ಆಡಿಸುತ್ತಿದ್ದ
ಕೋಳಿಮರಿಯ ಸಾಕುತ್ತಿದ್ದ
ಅದಕೆ ಕಾಳು ಹಾಕುತ್ತಿದ್ದ//
ಮನೆಯ ಹೊರಗೆ ಕುಳಿತಿದ್ದ
ಗೇಟ ಹೊರಗೆ ಇಣುಕುತಿದ್ದ
ಬೀಡಿಯನ್ನು ಸೇದುತ್ತಿದ್ದ
ರೋಗದಿಂದ ನರಳುತಿದ್ದ//
ಬೇಡವೆನಲು ಯಾರನ್ನೂ ಕೇಳದೆ
ಕೆಟ್ಟ ಚಟದಿ ಕ್ಷಯವು ಬರಲು
ಅಜ್ಜ ಮನದಿ ಸೊರಗಿದ
ಕೊನೆಗೆ ತಾನು ಮರುಗಿದ//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ