ಶುಕ್ರವಾರ, ಜನವರಿ 4, 2019

676.ಮಕ್ಕಳ ಕವನ-5

ಕನ್ನಡ ಸಿರಿನುಡಿ

ಕನ್ನಡ ಸಿರಿನುಡಿ ನೆಲ್ಮೆಯ ನಲ್ನುಡಿ
ರನ್ನ ಪಂಪರ ಹೊನ್ನಿನ ಸವಿನುಡಿ
ನವ್ಯ ನವೋದಯರ  ಒಲವಿನ ಚೆನ್ನುಡಿ
ದಾಸ ಶರಣರ ಸಾಹಿತ್ಯದ ಮುನ್ನುಡಿ//

ರಾಜಕುಮಾರನು ಸಾರಿದ ಕನ್ನಡ
ಲೇಖಕ ಕವಿಗಳು ಗೀಚಿದ ಕನ್ನಡ
ವಾಗ್ಮಿ, ನಾಯಕರ ಪದಗಳ ಕನ್ನಡ
ನಾಲಗೆ ತುದಿಯಲಿ ಚಿನ್ನದ ಕನ್ನಡ//

ವರುಣನ ಸರಸರ ಶಬ್ದವೂ ಕನ್ನಡ
ನೀರಿನ ಕಲಕಲ ನಾದವೂ ಕನ್ನಡ
ಸೂರ್ಯನ ಕಿರಣದ ಬಾಣವೂ ಕನ್ನಡ
ಮಗುವಿನ ಅಳುವಿನ ರಾಗವೂ ಕನ್ನಡ//

ವಚನಕಾರರ ನುಡಿಯಿದು ಕನ್ನಡ
ಪ್ರಾಣಿ ಪಕ್ಷಿಗಳ ಕಲರವ ಕನ್ನಡ
ಗಾದೆ-ಉಕ್ತಿಗಳ ವಾಕ್ಯವೂ ಕನ್ನಡ
ಮನದ ಭಾವಗಳ ರೂಪಕ ಕನ್ನಡ//

ಅರಳಿ ಪರಿಮಳ ಬೀರಲಿ ಕನ್ನಡ
ನಗುವ ಮೊಗದಲಿ ಬರಲಿ ಕನ್ನಡ
ಕರಗುವ ಹೃದಯವು ನೆನೆಯಲಿ ಕನ್ನಡ
ಕಲಿಕಾರ್ಥಿಗಳು ಕಲಿಯಲಿ ಕನ್ನಡ//

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ