ಗುರುವಾರ, ಜನವರಿ 3, 2019

675. ನ್ಯಾನೋಕತೆ-9

ನ್ಯಾನೋ ಕತೆ

ಬದುಕು..

ಸುನಾಮಿಯೊಂದು ಅಪ್ಪಳಿಸಿ ಬಂದು ಶಾಂತವಾದಂತೆ ಅನ್ನಿಸಿತು ಶಾಂತಾಳ ಬದುಕಲ್ಲಿ! ಹೆಸರು ಮಾತ್ರ ಶಾಂತ. ಆದರೆ ಬದುಕಿನಲ್ಲಿ ಗಂಡನಿರುವಷ್ಟು ದಿನ ಯಾವುದೇ ಶಾಂತಿ, ನೆಮ್ಮದಿ ಇರಲಿಲ್ಲ. ಸಮಾಜಕ್ಕೆ ಹೆದರಿ ಅವನೊಡನೆ ಬಾಳಲಾರದೆ ಬಾಳುತ್ತಿದ್ದಳು ಮುತ್ತೈದೆ ಎಂಬ ಹಣೆಪಟ್ಟಿಗಾಗಿ! ನೀರು ಹಾಕದೆಯೇ ಕಂಠ ಪೂರ್ತಿ ಕುಡಿದು ನೀರಿಲ್ಲದೆ ಜೀವ ತೆತ್ತ ಗಂಡ ಒಂದು ದಿನದ ಸುಖವನ್ನೂ ನೀಡದೆ ಸತ್ತಾಗ ನಗಬೇಕೋ ಅಳಬೇಕೋ ತಿಳಿಯಲಿಲ್ಲ ಅವಳಿಗೆ!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ