ಮಂಗಳವಾರ, ಜನವರಿ 15, 2019

709. ನಗಿ

ನಗಿ
ನಾನಾನಾನಾ ನಾನಾನಾನಾ
ನಾಗಿ ನಮ್ಮ ನೆರೆಗೆ ಬಂದು
ನಗೆಯ ಕಲಿಸಿ ನಗುತಲಿದ್ದು
ನಗೆಯ ಸುಧೆಯ ಉಕ್ಕಿ ಹರಿಸಿ
ನಗೆಗಡಲಲಿ ತೇಲಿಸಿ ಹೋಗಿ...
ನಾನಾನಾನಾ...

ನೂರು ಭಾವಗಳ ಜತೆಗೆ ಸೇರಿಸಿ
ನವ್ಯ ಭಾವನೆಯ ಹಣೆದು ಜೋಡಿಸಿ
ನೋವು ನುಂಗುತ,ನಿಜವ ಹೇಳುತ
ನಗುತ ಬಾಳುವ ಕ್ಷಣ ಕ್ಷಣ ನಾವು
ನಾನಾನಾನಾ...

ನವಿಲು ಕುಣಿದಂತೆ ಸಂತಸದಿಂದ
ನಾಡು ನಾಡಲಿ ನಾದವಾಡುತ
ನಮ್ಮಯ ಬದುಕನು ನಾವೆ ಕಟ್ಟುತ
ನಗೆಯಲಿ ದುಃಖವ ತಣಿಸಿ ಹಾಡುತ
ನಾನಾನಾನಾ...

ನರಕ ದೂರಕೆ ಎಸೆದು ನಡೆಯುತ
ನಯನ ಮನೋಹರ ಕಿರಣ ಚೆಲ್ಲುತ
ನಮಸ್ಕಾರವ ಮಾಡಿ ನಮಿಸುತ
ನಬದಲಿ ನಡೆಯುವ ಬಾನಾಡಿಯಂತೆ
ನಾನಾನಾನಾ...

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ