ಬುಧವಾರ, ಜನವರಿ 16, 2019

711. ಭಾವಗೀತೆ-3

ಸುಗ್ಗಿಯ ಹಿಗ್ಗು

ಹಿಗ್ಗು ಬಂತು ಸುಗ್ಗಿಯಲ್ಲಿ
ಬಗ್ಗಿ ಬಗ್ಗಿ ನಿನ್ನ ನೋಡೆ
ನನ್ನ ಸಣ್ಣ ಹೃದಯವನ್ನ
ಕದ್ದೆಯಲ್ಲೆ ಚೋರಿ?

ಮದ್ದಿನಿಂದ ಸರಿಯಾಗಲಾರೆ
ನಿನ್ನ ಪ್ರೀತಿ ಮಾತು ಬೇಕು
ಸಿಕ್ಕು ಓಡಿಹೊದ ಬೆಕ್ಕಿನಂತೆ
ಕಾಡ್ತೀಯಲ್ಲೆ ಹುಡುಗಿ..

ಮಗ್ಗಿ ಹುಗ್ಗಿ ಬರದು ನನಗೆ
ನೀನೆ ಪೆಗ್ಗು, ನೀನೆ ಕಿಕ್ಕು
ನಕ್ಕು ಓಡಬೇಡವೇ..
ನೀನು ನನಗೆ ಅಲ್ಲವೇ?

ಹೆಣ್ಣು, ಮಣ್ಣು, ಹೊನ್ನು ಬೇಡ
ನೀನು ಇರದೆ ಬಾಳು ಬೇಡ
ನಿನಗಾಗಿಯೆ ಮುಡಿಪಿರಿಸಿಹೆ
ನನ್ನ ಬಾಳ ಜ್ಯೋತಿಯ...

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ