ಭಾನುವಾರ, ಜನವರಿ 20, 2019

717. ಮಕ್ಕಳ ಕವನ-8

ಮುದ್ದಿನ ಅಮ್ಮ

ನಾವು ಎಷ್ಟೆ ತಂಟೆ ಮಾಡಿದ್ರೂ
ಸೆರಗ ಹಿಡಿದು ಜಗ್ಗಿದ್ರೂ
ಕೈಯ ಹಿಡಿದು ಎಳೆದ್ರೂನೂ
ತಾಳ್ಮೆಯಿಂದ ಸಹಿಸಿ ಕೊಂಡು
ಮುದ್ದು ಮಾಡೊ ಅಮ್ಮಾ...

ತಂಟೆ ಗಿಂಟೆ ಬೇಡವೆಂದು
ಪೆಟ್ಟು ಕೊಟ್ರೂ ಬೇಸರದಿ
ತಾನೇ ಅತ್ತು ನಮ್ಮ ನಗಿಸೊ
ನಮ್ಮ ಮುದ್ದಿನಮ್ಮಾ...

ಓದು ಬರಹ ಕಲಿಸಿ ನಮಗೆ
ಮೊದಲ ಗುರುವು ಆಕೆಯಲ್ವೆ
ಬುದ್ಧಿಯನ್ನು ತಿದ್ದಿ ತೀಡೊ
ನಲ್ಮೆಯ ಮಾತೆ ಅಮ್ಮಾ..

ಎದ್ದರೂನು ಬಿದ್ದರೂನು
ಭಯದ ವಾತಾವರಣದಲ್ಲೂ
ಬಾಯಿಯಿಂದ ಒಂದೇ ಮಾತು
ಅದುವೆ ನಮ್ಮ ಅಮ್ಮಾ..

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ