ಗುರುವಾರ, ಜನವರಿ 10, 2019

690. ದಕ್ಷಿಣೆ

ಬದುಕು ಹೀಗೆಯೇ..

ಹುಟ್ಟಿದಂದಿನಿಂದ ಪ್ರಾರಂಭಿಸಿರುವೆ
ಕೊಡಲು ದಕ್ಷಿಣೆಯ..
ಅಮ್ಮನೊಡನೆ ಹೊಂದಿಕೊಳ್ಳುವುದು..
ಅಪ್ಪನ ಸಾಮರ್ಥ್ಯಕ್ಕೆ ಒಗ್ಗಿಕೊಳ್ಳುವುದು...

ಅಜ್ಜಿಯ ಸುಳ್ಳು ಕತೆಗೆ ಕಿವಿ ಕೊಡುವುದು
ಅಜ್ಜನ ತಿಂಡಿಗೆ ಹಾತೊರೆವುದು..

ತಂಗಿಯ ಏಟಿಗೆ ಬೆನ್ನೊಡ್ಡುವುದು
ಅಕ್ಕನ ಮಾತಿಗೆ ತಲೆಬಾಗುವುದು...

ಗೆಳೆಯರ ಯೋಜನೆಗೆ ನೆರವಾಗುವುದು
ಭಟ್ಟರ ಪೂಜೆಗೆ ಕಾಣಿಕೆ ಹಾಕುವುದು..

ಮದುವೆಯ ಮನೆಗೆ ಗಿಫ್ಟ್, ಹಣ ಕೊಡುವುದು
ಮದುವೆಯಾದವಗೆ ಸಾಕಲು ಧನ ಕೊಡುವುದು..

ಪರರ ವಸ್ತುಗಳು ತಮಗೆ ಬೇಡವೆನುತ
ತಮ್ಮ ಪಾಲಿಗೆ ಪುಣ್ಯ ಬರಲೆನುತ

ದಕ್ಷಿಣೆಯೀಯದೆ ಬದುಕಿಲ್ಲ,
ಪ್ರೀತಿಯ ದಕ್ಷಿಣೆ ಬೇಕಲ್ಲ!!!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ