ಶುಕ್ರವಾರ, ಜನವರಿ 4, 2019

677. ನ್ಯಾನೋಕತೆ-10

ಒಡೆದ ಸಂಬಂಧ

ನಾನು-ನೀನು ಇಬ್ಬರೂ ನಾವಿಬ್ಬರೂ ಒಂದೇ ಎಂದು ಚೆನ್ನಾಗಿ ಹೊಂದಿಕೊಂಡು ಬಾಳುತ್ತಿದ್ದರು. ಪರಸ್ಪರ ನೆರವಾಗಿ ಆನಂದದಲ್ಲಿ ತೇಲಾಡುತ್ತಿದ್ದರು. ಕಷ್ಟ-ಸುಖ ಸಮನಾಗಿ ಹಂಚಿಕೊಳ್ಳುತ್ತಿದ್ದರು ಕೂಡಾ. ನಾನು ನೀನಾಗಿ, ನೀನು  ನಾನಾಗಿ ನಾನಾ ಕಾರ್ಯಗಳಲ್ಲಿ ಸಮಾಜ ಸೇವೆಯನ್ನೂ ಮಾಡುತ್ತಾ ಹೆಸರುವಾಸಿಯಾಗಿದ್ದರು. ಅಷ್ಟಾಗುವಾಗ ಚುನಾವಣೆ ಬಂತು. ಬೇರೆ ಬೇರೆ ಪಕ್ಷದವರು ಅವರ ಪ್ರಣಾಳಿಕೆಗಳಿಂದ ಅವರನ್ನು ಒಲಿಸಿಕೊಂಡರು. ಒಂದಾಗಿ ಸಾಗುತ್ತಿದ್ದ ಬದುಕನ್ನು ಕ್ಷಣಮಾತ್ರದಲ್ಲಿ ಮರೆತು ನಾನು ಮತ್ತು ನೀನು ಪಕ್ಷದಿಂದಾಗಿ ಬೇರೆ ಬೇರೆಯಾಗಿ ವಿರುದ್ಧ ಪಕ್ಷದವರಾದರು!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ