4ಸಾಲು ಚುಟುಕು.
2 ಸಾಲು ದ್ವಿಪದಿ
3 ಸಾಲು ತ್ರಿಪದಿ
ಅರ್ಥ ಗರ್ಭಿತವಾಗಿ ಕೆಲವು ವಚನಗಳನ್ನೂ ತ್ರಿಪದಿಗಳಲ್ಲೆ ಬರೆಯಬಹುದು. ಅಂಕಿತವಿರಬೇಕು.
5-8 ಸಾಲು ಹನಿಗವನ
9-15 ಸಾಲು ಇನಿಗವನ
16, 18, 20, 22, 24 ಸಾಲು ಕವನ
25< ನೀಳ್ಗವನ
ಕತೆಯಾಧಾರಿತ- ಕಥನ ಕವನ
5-7-5 ಪದ, 3 ಸಾಲು ಹಾಯ್ಕು
ದ್ವಿಪದಿಯ ಶೇರ್ ಗಳು, ಕಾಫಿಯಾ, ರಧೀಫ್ ನೊಂದಿಗೆ-ಗಝಲ್
ದಿನಕರ ದೇಸಾಯಿ ವರಸೆ ಚುಟುಕುಗಳು ನಾಲ್ಕೈದು ಪದಗಳ ನಾಲ್ಕು ಸಾಲು, ಕೊನೆಯ ಸಾಲು ಪಂಚಿಂಗ್ ಇರಲೇ ಬೇಕು.
ದುಂಡಿ ರಾಜ್ ಸ್ಟೈಲಿನ ಚುಟುಕುಗಳು 2-3 ಪದಗಳ 4ಸಾಲು, ಪಂಚಿಂಗ್.
ಭಕ್ತಿ ಪ್ರಧಾನ ಗೀತೆಗಳು ಭಕ್ತಿಗೀತೆ, ಹಾಡುತ್ತಾ ಕುಣಿಯಬಹುದಾದವುಗಳು ಭಜನೆ. ಭಕ್ತಿಯೇ ಮೈವೆತ್ತಂಥದ್ದು , ಅನುಭವಿಸಿ ಬರೆದಂಥದ್ದು ಭಕ್ತಿ ರಚನೆ, ಕೀರ್ತನೆಗಳು.
ದೇಶಾಭಿಮಾನದಲಿ ದೇಶ ರಾಜ್ಯಕ್ಕಾಗಿ ಬರೆದ ಗೀತೆಗಳು ದೇಶ ಭಕ್ತಿ ರಚನೆಗಳು.
ಒಂದು ಘಟನೆ, ವ್ಯಕ್ತಿಯ ಸುತ್ತ ಹಾಡುವಂತೆ ಹೆಣೆದ ಉದ್ದ ಪದ್ಯಗಳು ಲಾವಣಿಗಳು.
ಒಂದು ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಬರೆಯುವುದು ಬಂಡಾಯ ಕಾವ್ಯ.
ಭಾವನೆಗಳೇ ಮೂಲವಾದದ್ದು ನವೋದಯ , ನವ್ಯ ಕಾವ್ಯ.
ಮಾಡರ್ನ್ ಆಗಿ ಬರೆಯುವಂಥದ್ದು ಕಾಂಟೆಂಪರರಿ ಸ್ಟೈಲ್.
ಪುಟ್ಟದಾದ ಕತೆ ನ್ಯಾನೋ ಕತೆ. 5-6 ವಾಕ್ಯದೊಳಗಿನದ್ದು.
ಒಂದೆರಡು ಪುಟಗಳ ಕತೆ ಸಣ್ಣ ಕತೆ.
4-10 ಪುಟಗಳ ಕತೆ ನೀಳ್ಗತೆ.
50 ಪುಟ ದಾಟಿದ ಕತೆ ಕಾದಂಬರಿ.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಚಾರಿತ್ರಿಕ, ವೈಚಾರಿಕ, ನೈಜ ಘಟನೆ ಆಧಾರಿತ, ಹಾರರ್, ಟ್ರ್ಯಾಜಿಡಿ ಕೊನೆಯಲ್ಲಿ ಬೇಸರದ ಛಾಯೆ, ಕಲ್ಪನಾತೀತ ಇತ್ಯಾದಿ.
ಮಕ್ಕಳ ಬಗ್ಗೆ, ಮಕ್ಕಳಿಗಾಗಿ ಬರೆದ ಮೇಲಿನ ಯಾವುದೇ ಸಾಹಿತ್ಯ ಪ್ರಕಾರ ಶಿಶು ಸಾಹಿತ್ಯ.
ಸರಿಯಾದ ಭಾಷಾ ಛಂದಸ್ಸು, ಮಾತ್ರಾ ಗಣ, ಅಕ್ಷರ ಗಣದ ನಿಯಮಗಳನ್ನು ಅನುಸರಿಸಿ ರಗಳೆ, ವೃತ್ತ, ಕಂದಪದ್ಯ, ಷಟ್ಪದಿ ರಚಿಸಬಹುದು.
ಇತರರ ಕತೆ, ಕವನ ಓದಿ ಅದರ ಓರೆ ಕೋರೆಗಳ ಬಗೆಗೆ ತಮ್ಮ ಅಭಿಪ್ರಾಯ ದಾಖಲಿಸುವುದು ವಿಮರ್ಶೆ.
ತಮ್ಮದೇ ಜೀವನದ ಘಟನೆಗಳನ್ನು ತಾನೇ ಬರೆದು ಪ್ರಕಟಗೊಳಿಸುವುದು ಆತ್ಮಕತೆ.(ಆಟೋ ಬಯಾಗ್ರಫಿ)
ನಿಮ್ಮ ಜೀವನದ ಘಟನೆಗಳನ್ನಾಧರಿಸಿ ನಿಮ್ಮ ಬಗ್ಗೆ ಇತರರು ಬರೆಯುವುದು ಬಯಾಗ್ರಫಿ.
ಪ್ರತಿನಿತ್ಯ ನಿಮ್ಮ ಜೀವನದ ಆಗು ಹೋಗುಗಳನ್ನು ನೀವು ದಾಖಲಿಸಿ ಬರೆಯುವುದು ಡೈರಿ.
ಪಾತ್ರಗಳನ್ನು ಸೃಷ್ಟಿಸಿ ಅವುಗಳ ಮೂಲಕ ಮಾತನಾಡಿಸುವುದು ನಾಟಕ.
ನಾಟಕದ ನಡುವೆ ಪದಗಳ ಸೇರಿಸುವುದು ಗೀತಾ ನಾಟಕ, ರೂಪಕ.
ಕತೆ ಮತ್ತು ಹಾಡು ಒಟ್ಟಿಗೆ ಒಂದಾದ ಮೇಲೊಂದು ಹೆಣೆದು ಕತೆ ಕಟ್ಟುವುದು ಕಥಾ ರೂಪಕ.
ದೇವರ ಬಗೆಗೆ 40 ಸಾಲುಗಳಲ್ಲಿ ಬರೆದು ಸ್ತುತಿಸುವುದು ಚಾಲೀಸ್.
ಯಾವುದೇ ವಿಚಾರದ ಬಗ್ಗೆ ಅಭಿಪ್ರಾಯ ದಾಖಲಿಸುತ್ತಾ ಹೋಗುವುದು ಸರಳ ಭಾಷೆಯನ್ನು ಬಳಸುತ್ತಾ, ಇದು ಲೇಖನ.
ಮನದ ಭಾವನೆಗಳಿಗೆ ಹಾಡಿನ ರೂಪ ಕೊಟ್ಟು ಬರೆಯುವುದು 14-20 ಸಾಲು ಭಾವಗೀತೆ.
ಒಂದು ವಿಷಯದ ಮೇಲೆ ಲಘುವಾಗಿ ಬರೆದೂ, ಕಾಮಿಡಿಯಾಗಿ ಸತ್ಯವನ್ನು ಅದು ಇದ್ದ ಹಾಗೆಯೇ ಹೇಳಿ ಸಮಾಜ ತಿದ್ದುವಂಥ ಬರಹ ಲಘು ಬರಹ, ಲಘು ಪ್ರಬಂಧ.
ಪೀಠಿಕೆ, ಪ್ರಸ್ತಾವನೆ, ವಿಷಯ
ವಿಸ್ತಾರ, ಮುಕ್ತಾಯ(ಕಂಕ್ಲೂಶನ್) ಕೊಟ್ಟು, ಉದಾಹರಣೆಗಳ ಸಹಿತ ಬರೆಯುವುದು ಪ್ರಬಂಧ, ಲಲಿತ ಪ್ರಬಂಧ.
ಸಂಗೀತ ಕಲಿತವರಿಗಾಗಿಯೇ ಹಾಡಲು ಬರೆಯುವುದು ವರಸೆಗಳು, ಸುಳಾದಿ, ಉಗಾಭೋಗ.
ಕವನವೂ ಅಲ್ಲದ ಲೇಖನವೂ ಅಲ್ಲದ ನೇರನುಡಿ ವಚನ.
ನಾಲ್ಕೇ ಸಾಲುಗಳಲ್ಲಿ ಹೇಳುತ್ತಾ ಹೋಗುವ ಕವನಗಳು ಚೌಪದಿಗಳು.
ಕವನ ಸಾಲಿನ ಕೊನೆಯಲ್ಲಿ ಒಂದೇ ಸೌಂಡ್, (ಪದೋಚ್ಛಾರ) ಕನ್ನಡದಲ್ಲಿ ಆದರೆ ಒಂದೇ ಅಕ್ಷರ ಬಂದರೆ ಅಂತ್ಯ ಪ್ರಾಸ.
ಕವನದ ಮೊದಲಲ್ಲಿ ಒಂದೇ ಅಕ್ಷರ ಬಂದರೆ ಆದಿಪ್ರಾಸ.
ಕವನದ ನಡುವಿನಲ್ಲಿ ಒಂದೇ ಸ್ವರ ಸಹಿತ ವ್ಯಂಜನಾಕ್ಷರ ಮತ್ತೆ ಮತ್ತೆ ಬಂದರೆ ಮಧ್ಯ ಪ್ರಾಸ.
ಇದಕ್ಕೆ ಶಬ್ದಾಲಂಕಾರ ಎನ್ನುವರು.
ಒಂದೇ ಪದವನ್ನು ಬೇರೆ ಬೇರೆ ಅರ್ಥ ಬರುವಂತೆ ಬಳಸುವ ಕೌಶಲ್ಯ ಅರ್ಥಾಲಂಕಾರ.
ಒಂದು ವಸ್ತುವಿನಂತೆ ಇನ್ನೊಂದು ವಸ್ತುವಿದೆ ಎನ್ನುವುದನ್ನು ಹಾಗೆ, ಅಂತೆ,ಅಂತೆಯೇ, ತೆರದಿ ಮೊದಲಾದ ಪದ ಬಳಸಿ ಬಿಂಬಿಸುವುದು ಉಪಮಾಲಂಕಾರ.
ಸಂಬಂಧವೇ ಇಲ್ಲದ ಎರಡು ವಸ್ತು, ಭಾವಗಳನ್ನು ಒಂದಕ್ಕೊಂದು ಹೋಲಿಸಿ, ಒಂದು ವಸ್ತುವೇ ಇನ್ನೊಂದು ಎನ್ನುವ ಭಾವ ಬಿಂಬಿಸಿದರದು ರೂಪಕ.
ಜೀವವಿಲ್ಲದ ವಸ್ತುಗಳಿಗೆ ಸಜೀವಿಗಳ ಗುಣವನ್ನು ಸಾಂಕೇತಿಸಿ ಹೇಳಿದರೆ ಅದು ಪರ್ಸಾನೀಫಿಕೇಶನ್.
ಇಡೀ ಒಂದು ಸಂವತ್ಸರವೋ, ಒಂದು ಜನರೇಶನ್ ಬಗ್ಗೆ ಕುರಿತು ಪೂರ್ತಿ ಬೆಳಕು ಚೆಲ್ಲಿ ಬರೆದರದು ಮಹಾಕಾವ್ಯ, ಖಂಡಕಾವ್ಯ.
ಒಂದು ಸ್ಥಳವನ್ನು ಭೇಟಿ ಮಾಡಿ ಅಲ್ಲಿನ ವಿಶೇಷತೆಗಳ ಬಗ್ಗೆ ಬರೆದರೆ ಪ್ರವಾಸ ಕಥನ.
ಒಂದೇ ಹೆಸರಿನಡಿ, ಒಂದೇ ವಿಷಯದ ಮೇಲೆ, ನಿಗಧಿತ ಪದಗಳಲ್ಲಿ ಬರೆಯುತ್ತಾ ಹೋದರೆ ಅದು ಅಂಕಣ ಬರಹ.
ಪತ್ರಿಕೆಗಳಿಗಾಗಿ, ಸಾಮಾಜಿಕ ಮಾಧ್ಯಮಗಳಿಗಾಗಿ ನಡೆದ ಘಟನೆ, ಕಾರ್ಯಕ್ರಮಗಳ ಬಗ್ಗೆ ಪ್ರತ್ಯಕ್ಷ ಕಂಡು, ಅದನ್ನು ಚಿಕ್ಕದಾಗಿ ಬರೆದರೆ ಅದು ವರದಿ.
ಈ ರೀತಿ ಕಾವ್ಯದ ವಿವಿಧ ಸ್ತರಗಳ ಬಳಸಿ ಬರೆಯಿರಿ. ಉತ್ತಮ ಕವಿಗಳಾಗಿ, ಕಾದಂಬರಿಕಾರರಾಗಿ, ಲೇಖಕರಾಗಿ, ಕಾದಂಬರಿಗಾರರಾಗಿ, ವಚನಕಾರರಾಗಿ,ಪತ್ರಕರ್ತರಾಗಿ, ವರದಿಗಾರರಾಗಿ,ಬರಹಗಾರ, ಲೇಖಕರಾಗಿ, ಅಂಕಣಕಾರರಾಗಿ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸೇವೆಯನ್ನು ಕರ್ನಾಟಕಕ್ಕೆ ನೀಡೋಣ.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ