ಮಂಗಳವಾರ, ಜನವರಿ 8, 2019

680. ಶರಣು ಶಿವ

ಶರಣು ಶಿವ ಈಶ್ವರನೆ ನಿನಗೆ ನಮಿಪೆವು
ಬದುಕ ಗಾಳಿಪಟವನು ಏರಿಸುವೆ ನೀನು//

ಶಿವರಾತ್ರಿಯ ದಿನದ ರಾತ್ರಿಯಂದು
ಶಿವಧ್ಯಾನದಿ ಉಪವಾಸ ಮಾಡುತಿರಲು
ಭಕ್ತಿಯ ಪೂಜೆಯನು ನಿನಗೆ ಅರ್ಪಿಸಲು
ಸ್ವೀಕರಿಸೋ ನೀ ನಮ್ಮ ನೀಲಕಂಠನೇ//

ಪಾರ್ವತಿ ದೇವಿಯ ಪ್ರಾಣ ಪ್ರಿಯನೇ
ಗಣಪತಿ ಬಾಲಸುಬ್ರಹ್ಮಣ್ಯರ ಪಿತಾಮಹನೆ
ಬ್ರಹ್ಮ ವಿಷ್ಣು ದೇವರ ಸ್ಥಾನ ಪಡೆದವ
ತ್ರಿಮೂರ್ತಿಗಳಲಿ ಒಂದಾಗಿ ಜಗದಿ ಮೆರೆದವ//

ನ್ಯಾಯ ನಿಷ್ಠೆ ಭಕ್ತಿ ಧರ್ಮ ಗುಣಕೆ ಒಲಿವವ
ಭಕುತರನು ಪರೀಕ್ಷಿಸಿ ವರವ ಕೊಡುವವ
ರಾವಣನಿಗೆ ಪ್ರಾಣ ಲಿಂಗ ನೀಡಿ ಹರಸಿದೆ
ಮೋಹಿನಿಯ ವರಿಸಿ ಅಯ್ಯಪ್ಪನ ಪಡೆದೆ//

ಕೈಲಾಸದಿ ತಣ್ಣಗೆ ಕುಳಿತು ಜನರ ಹರಸಿದೆ
ಮುಗ್ದ ಜನರ ಬೇಡಿಕೆಗಳ ಪೂರೈಸಿದೆ
ಬೆಟ್ಟದ ತುದಿಯಲ್ಲಿ ನಿನ್ನ ವಾಸವು
ಸುತ್ತ ನೀರ ನದಿ ಸರೋವರ ನಿನ್ನ ಇಷ್ಟವು//

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ