ಶರಣು
ದೇವನೆ ನಿನ್ನಯ ಪ್ರೀತಿಗೆ ಶರಣು
ಇಳೆಯೊಳಗೆನ್ನನು ತಂದಿಹ ಮಾತೆಗೆ
ಧರೆಯೊಳು ಸಲಹಿದ ಪ್ರೀತಿಯ ತಂದೆಗೆ
ಬುದ್ಧಿಯ ಕಲಿಸಿದ ಗುರುವಿನ ಪಾದಕೆ ಶರಣು...//
ಊಟ, ನೀರನು ಒದಗಿಸಿದ ಪ್ರಕೃತಿಗೆ
ಗಾಳಿಯ ಕೊಟ್ಟ ಗಿಡಮರ ವರ್ಗಕೆ
ಬೆನ್ನು ತಟ್ಟುತಿಹ ಗೆಳೆಯರ ಬಳಗಕೆ
ಮೆದುಳನು ಮೇಯಿಸಿ ಬೆಳೆಸುವ ಜನತೆಗೆ ಶರಣು..//
ಶರಣಾಗತ ನಾ ಹಾಲುಣಿಸುವ ದನಕೂ,
ಭಾವವ ತುಂಬುತ ಮೆರೆದಿಹ ಮನಕೂ.
ನೆರಳಾಗಿ ಬಂದ ಬಾಳ ಸಂಗಾತಿಗೂ,
ವರ್ಷವ ಸುರಿಸುವ ಕರಿಯ ಮೇಘಕೂ ಶರಣು..//
ಬರೆಯಲು ಸಹಾಯವಾದ ಕೈಗಳಿಗೆ,
ಆಲೋಚನೆ ಮಾಡಿ ಬದುಕುವ ಮೆದುಳಿಗೆ,
ಪ್ರೀತಿ ಹಂಚುವ ಶುದ್ಧ ಹೃದಯಕೆ
ಮನಮೆಚ್ಚಿ ಬರೆಯುವ ಕವಿಪುಂಗವರಿಗೆ ಶರಣು..//
ವಾದ್ಯಗಳ ನುಡಿಸಿ, ಹಾಡುವ ಸಂಗೀತದುಸಿರಿಗೆ,
ನೀರಲಿ ಖುಷಿಯನು ನೀಡುವ ಶರಧಿಗೆ,
ಮನವನು ತಣಿಸುವ ಆಲೋಚನಾ ಸುರುಳಿಗೆ,
ದೇಶವ ಕಾಯುವ ವೀರ ಯೋಧರಿಗೆ ಶರಣು..//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ