ಶನಿವಾರ, ಜನವರಿ 5, 2019

679. ಚಾವಡಿಯ ವಿಮರ್ಶೆಗಳು

[1/1, 7:04 AM] Wr Shivaprasad Aradhya: ಪ್ರೇಮ ನೀವು ನಿಮ್ಮ ಕಥಾನಾಯಕ ಸುಂದರನಿಗೆ ಸುಂದರ ಬದುಕ ಕೊಟ್ಟಿರಿ. ದುರಂತವಾಗಬೇಕಾಗಿದ್ದ ಬಾಳಿಗೆ ಅದೆಲ್ಲಿದ್ದಳೋ ಅವನಂತೆ ಸಾಯ ಹೊರಟಿದ್ದ ಸಮಾನಮನಸ್ಕಳಿಗೆ ಡಿಕ್ಕಿ ಹೊಡೆಸಿ.ವಾವ್ ವಾವ್ ಹೇಗೆ ಹೊಳೆದಿದೇರೀ.ಅತ್ಯದ್ಭುತ ತಿರುವು.ಅಂತೂ ಆ ಡಿಕ್ಕಿಯಿಂದ ಅವರಲ್ಲಿ ಏನೇನೋ ಆಗಿ ನವೋದಯ ಅಗಿದೆ.ಸುಂದರ ಮನದ ಸುಂದರ ಕತೆ

ಶಿವಪ್ರಸಾದ್ ಆರಾಧ್ಯ ನೆಲಮಂಗಲ
[1/1, 12:41 PM] ‪+91 91415 05789‬: ಪ್ರೇಮ್ ಜೀ..

ನವೋದಯ..

ಏನೆಲ್ಲಾ..ತಂದ್ರಿ..ನ್ಯಾನೋ ದಲ್ಲಿ...ವಾವ್.ಇಲ್ಲದ.ಸೌಂದರ್ಯದ...ಜಿಗುಪ್ಸೆಯಲ್ಲಿನ...ಪ್ರೇಮೋದಯ...!!!

ಚೆನ್ನಾಗಿದೆ ಜೀ

ಧನ್ಯವಾದಗಳು🙏🏼💐
ಎಸ್.ನಾಗಮ್ಮ
[1/1, 7:32 PM] Wr Hisaki: ಇಂದಿನ ಎರಡನೆಯ ಕತೆ ಪ್ರೇಮ್ ರವರ *ನವೋದಯ*

ನ್ಯಾನೋ ಕತೆಗೆ ಬೇಕಾದ ಎಲ್ಲ ಪರಿಕರಗಳು ಈ ಕತೆಯಲ್ಲಿವೆ. ಉತ್ತಮ ಆರಂಭ, ಒಂದೂ ಹೆಚ್ಚೆನಿಸದೆ ಅಳೆದು ತೂಗಿ ಬಳಸಿದ ಪದಗಳು, ಒಂದಷ್ಟು ಮೊನಚು ವ್ಯಂಗ್ಯ (ತಾನು ಸುಂದರನಲ್ಲ...ಆದ್ರೆ ಅವನ ಹೆಸರು ಸುಂದರ!!) ಹಾಗು ಕಡೆಯ ಪಂಚ್ ಅಥವಾ ಟ್ವಿಸ್ಟ್. ಹೀಗಾಗಿ ಇದೊಂದು ಉತ್ತಮ ನ್ಯಾನೋ ಕತೆ.

ಆದರೆ ಈ ಎಂಡಿಂಗ್ ಹಳತು.....

ಶುಭವಾಗಲಿ👍
[1/2, 7:04 AM] Wr Shivaprasad Aradhya: ವಾವ್ ಎಂತಹಾ ನಿಜ ಜೀವನದ ಒಂದು ಕತೆ ಪ್ರೇಮ ರವರ ನ್ಯಾನೋ ಹೀಗೆಲ್ಲಾ ಆಗುತ್ತಿದೆ. ಪ್ರೀತಿಗೂ ಪುರುಸೊತ್ತಿಲ್ಲದ ಬ್ಯುಸಿನೆಸ್ ಬ್ಯುಸಿ ಜನರಿದ್ದಾರೆ.ಮಕ್ಕಳ ಕೈಲಿ ಹಣ ಬೇಗ ಸಿಗುತ್ತಿರುತ್ತದೆ ಆದರೆ ಪ್ರೀತಿ ಶೂನ್ಯ. ಮಕ್ಕಳು ಸುಖ ಬಯಸಿ ಅಡ್ಡ ದಾರಿ ಹಿಡಿಯುತ್ತಾರೆ.ಉತ್ತಮ ನ್ಯಾನೋ ಕತೆ

ಶಿವಪ್ರಸಾದ್ ಆರಾಧ್ಯ ನೆಲಮಂಗಲ
[1/2, 9:21 AM] Wr Sham Prasad Bhat: *ತಪ್ಪು* ಪ್ರೇಮ್ ರವರ ನ್ಯಾನೋ

ಪ್ರೀತಿ ವಂಚಿತ ಮಕ್ಕಳು, ಸಂಪಾದನೆ ಒಂದೇ ಬಾಳಿನ ಗುರಿಯಾಗಬಾರದೆಂಬ ಆಶಯ ಚೆನ್ನಾಗಿದೆ... ಕಟ್ಟುವಿಕೆಯಲ್ಲಿ  ಸ್ವಲ್ಪ ಎಡವಿದಂತೆ ಅನಿಸಿತು🙏🏾👍🏻👌🏻
[1/3, 7:06 AM] ‪+91 78292 62994‬: *ಪ್ರೇಮ್ ಸರ್* ಅವರ *ಬದಲಾಗಬಹುದು ಬದುಕು*

👉ಸರ್ ನಿಮ್ಮ ಕತೆಯಲ್ಲಿ ಒಂದು ನೀತಿಯನ್ನು ತರಲು ಪ್ರಯತ್ನಿಸಿದ್ದೀರಿ.

👉ಕತೆಯ ಪ್ರಾರಂಭ ಚೆನ್ನಾಗಿದೆ.ಆದರೆ ಪೋಷಕರಿಬ್ಬರೂ ಜೊತೆಯಾಗಿ ಬರಬೇಕು,ಕ್ಲಾಸ್ ಕೊಡೊದಿದೆ ಎಂಬ ಕಾರಣಗಳು *ಬದಲಾಗಬಹುದು ಬದುಕು* ಕತೆಗೆ ಉತ್ತಮ ಅಂತ್ಯ ಹಾಡಿಲ್ಲ ಎಂಬುದು ನನ್ನ ಭಾವನೆ.

ಕವಿಭಾವಕ್ಕೆ ಧಕ್ಕೆಯಾಗಿದ್ದರೆ ಕ್ಷಮೆ ಇರಲಿ.
ಧನ್ಯವಾದಗಳು.

*ಮಂಜುನಾಥ.ಎಂ.ದೊಡ್ಡಮನಿ*
[1/3, 7:57 AM] Wr Uday Bhaskar Sullia: *ಪ್ರೇಮ ಮೇಡಂ*

*ಬದಲಾಗಬಹುದು ಬದುಕು* ಕಥೆಯಲ್ಲಿ ಗಂಡ ಹೆಂಡಿರನ್ನು ಒಂದಾಗಿಸಲು ಸುಲಭ ಸೂತ್ರವೊಂದನ್ನು ಶಿಕ್ಷಣ ಸಂಸ್ಥೆಯ ಮೂಲಕ ತಂದಿರುವಿರಿ. ಚೆನ್ನಾಗಿದೆ ಕಲ್ಪನೆ👌👌👌
[1/3, 9:51 AM] Wr Vara Lakshmi: ಪ್ರೇಮ್  ಅವರ ಬದಲಾಗಬಹುದು ಬದುಕು

ಕಾಲ ಎಲ್ಲರಿಗೂ  ಬುಧ್ಧಿ ಕಲಿಸುತ್ತ,  ಹಣವೊಂದೇ ಪ್ರಾಧಾನ್ಯವಲ್ಲ,  ಪರಸ್ಪರ ವಿಶ್ವಾಸ  , ಪ್ರೀತಿ,  ಮಾನವೀಯ ಸಂಬಂಧಗಳು  ಮುಖ್ಯ ಅನ್ನುವುದನ್ನು, ಈ ಸಣ್ಣ ಕಥೆಯಲ್ಲಿ ತಿಳಿಸಿದ್ದಾರೆ. 
ಆದರೆ ನಿರೂಪಣೆ  ಅಷ್ಟು ಪರಿಣಾಮಕಾರಿಯಾಗಿ  ಬರಲಿಲ್ಲ.   ತಪ್ಪು  ತಿಳಿಯಬೇಡಿ,  ಇದು ನನ್ನ ಅನಿಸಿಕೆ ಅಷ್ಟೇ... 🙏
[1/4, 7:02 AM] Wr Shivaprasad Aradhya: ಪ್ರೇಮ ಮೇಡಂ ಕತೆ ಆದರ್ಶಮಯ ಮತ್ತು ಮಾದರಿಯಾಗಿದೆ.ಪಟಾಕಿ ಸುಡುವವರೆಲ್ಲರಿಗೂ ಅ ಸದ್ಬುದ್ಧಿ ಬರಲಿ

ಶಿವಪ್ರಸಾದ್ ಆರಾಧ್ಯ
[1/5, 7:47 AM] Wr Sham Prasad Bhat: *ಪ್ರೇಮ್* ಸಂಬಂಧಗಳಲ್ಲಿ ಬಿರುಕು ಉಂಟಾಗುವ ಸಂಗತಿ ಯನ್ನು ಹೊಸ ಶೈಲಿಯಲ್ಲಿ ಪ್ರಸ್ತುತ ಪಡಿಸಿದಿರಿ..."ನಾನು,ನೀನು" ಎಂಬವುಗಳೇ ಇಲ್ಲಿ ಪಾತ್ರಗಳು..ಇದು ನ್ಯಾನೋ ಗೆ ಚೆನ್ನಾಗಿ ಹೊಂದಿಕ್ಕೊಳ್ಳುತ್ತೆ....ರಾಜಕೀಯ ಹೊಲಸನ್ನು ಇದೇ ರೀತಿಯಲ್ಲಿ ಹೇಳಿದರೆ ಚೆನ್ನ... ಚೆನ್ನಾಗಿದೆ ನ್ಯಾನೋ🙏🏾👍🏻👌🏻
[1/5, 8:18 AM] Wr Saroja Thigdolli: ಪ್ರೇಮ ಸರ್ ಅವರ

ಒಡೆದು ಸಂಬಂಧ

ಸತ್ಯ ಮಾತು ಸರ್ ಅಧಿಕಾರ ಅಹಂಕಾರ ಇವುಗಳು ಎಂತವರನ್ನು ದೂರ ಮಾಡಿ ಬಿಡುತ್ತವೆ ಇಂತಹ ಎಷ್ಟೋ ಉದಾಹರಣೆಗಳನ್ನು ಸಮಾಜದಲ್ಲಿ ಕಾಣಬಹುದು ಮಗ ಒಂದು ಪಕ್ಷ ತಾಯಿ ಒಂದು ಪಕ್ಷ ತಂದೆ ಒಂದು ಪಕ್ಷ ಅಣ್ಣ ತಮ್ಮಂದಿರು ಒಂದು ಪಕ್ಷ ಏಕೆ ಮನೆಯಲ್ಲಿದ್ದ 10 ಜನರು 10 ಪಕ್ಷದ ಪರ ಸಂಬಂಧಗಳು ಸತ್ತರು ಸರಿ ಎಲ್ಲರಿಗೂ ಅಧಿಕಾರ ಬೇಕು ಉತ್ತಮ ವಿಷಯವನ್ನು ಒಳಗೊಂಡ ಕಥೆ ತುಂಬಾ ಸುಂದರವಾಗಿ ಮೂಡಿಬಂದಿದೆ ಧನ್ಯವಾದಗಳು 

ಕವಿ ಭಾವಕೆ ಧಕ್ಕೆ ಆದರೆ ಕ್ಷಮೆ ಇರಲಿ
[1/5, 10:28 AM] ‪+91 78292 62994‬: *ಪ್ರೇಮ್ ಅವರ ಒಡೆದ ಸಂಬಂದ*

👉 ನಿಮ್ಮ ಕತೆ ಪ್ರಸ್ತುತಕ್ಕೆ ಹಿಡಿದ ಕೈಗನ್ನಡಿ.

👉ಈ ಚುನಾವಣೆ‌ ಎಂಬುದು ಶತ್ರುಗಳನ್ನೂ ಸೇರಿಸಬಹುದು,ಅದೇ ರೀತಿ ಎಷ್ಟೋ ಸ್ನೇಹ ಸಂಬಂಧಗಳನ್ನು ಮನ್ನು ಪಾಲುಮಾಡಿದ್ದಿದೆ.

👉 ಚೆನ್ನಾಗಿದೆ ಸರ್.ಇಷ್ಟವಾಯಿತು.

*ಮಂಜುನಾಥ.ಎಂ.ದೊಡ್ಡಮನಿ*

ರ[12/20/2018, 2:38 PM] Wr Sapna: ಜೀವನದುಯ್ಯಾಲೆಯ ಜೀಕುತಿಹೆ...

ಪ್ರೇಮ್ ಅವರ ಕವನ
ಬದುಕಿನ ಸಂಪೂರ್ಣ  ಚಿತ್ರಣ
ಜೋಕಾಲಿಯ ಜೊತೆ ತುಂಬಾ ಅರ್ಥಪೂರ್ಣವಾಗಿ ಮೂಡಿಬಂದಿದೆ 👌🏼👌🏼👌🏼
[12/21/2018, 11:33 AM] Wr Sham Prasad Bhat: ಬಾಳ ಸಂಜೆ

@ಪ್ರೇಮ್@

ಅರಿತು ಬಾಳಿದ್ದೇವೆ ಇದುವರೆಗೆ ಒಟ್ಟಿಗಿದ್ದು..ನೀ ನನಗಾಸರೆ,ನಾ ನಿನಗಾಸರೆ ಎಂಬ ಸಿದ್ಧಾಂತಕ್ಕೆ ಧಕ್ಕೆಯಾಗದ ರೀತಿಯಲ್ಲಿ.... ಮಕ್ಕಳ ಅಭ್ಯುದಯ ಬಯಸಿದ್ದು ನಿಜ..ಆದರೆ ಅವರಿಗದು ತಿಳಿದಿಲ್ಲ.. ಅದರಿಂದ ನಮಗಿಲ್ಲ ತೊಂದರೆ..ಇಳಿವಯಸ್ಸಿನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕ್ಕೊಂಡ ಚಿತ್ರಣ..

ಜವಾಬ್ದಾರಿಯಂತೆ ಹೆತ್ತು ಹೊತ್ತು ಸಾಕಿ ಸಲಹಿದ್ದೇವೆ..ಆದರೆ ಅವರನ್ನು ಅವಲಂಬಿಸಿ ನೋವು ಪಡೆಯಬಾರದೆಂಬ ಸ್ವಾವಲಂಬಿ ಆಲೋಚನೆ..

ಸರಸ ,ವಿರಸವಿತ್ತು ನಮ್ಮ ಬಾಳ ಪಯಣದಲ್ಲಿ, ಜೊತೆಯಲ್ಲಿ ನೋವು ನಲಿವುಗಳ ಹಂಚಿಕ್ಕೊಂಡು ಈಜಿ ದಡ ಸೇರುವ ತವಕ..

ಮಹಡಿಮನೆ, ಸಿರಿವಂತಿಕೆ ನಾವು ಬಯಸಿಲ್ಲ..ನಮ್ಮ ಪುಟ್ಟ ಮನೆಯಲ್ಲಿ ಅದಕ್ಕಾವ ಕೊರತೆ ಇರಲಿಲ್ಲ ಎಂಬ ಕವಿಭಾವ

ಯುಕ್ತಿ ಎಂಬ ಇಟ್ಟಿಗೆ ಉಪಯೋಗಿಸಿ ಬದುಕೆಂಬ ಬಂಗಲೆ ಕಟ್ಟಬೇಕಾಗಿದೆ..ಇಳಿ ವಯಸ್ಸಿನಲ್ಲೂ ಅದು ಸಾಧ್ಯವಿದೆ..ದೇಹ ದುರ್ಬಲವಾದರೂ ಮನಶಕ್ತಿ ಕುಗ್ಗಬಾರದೆನ್ನುತ್ತಾ ಅಂತ್ಯ ಕಂಡ ಕವನ ಸೊಗಸಾಗಿದೆ.🙏🏾👌🏻👍🏻
[12/21/2018, 3:24 PM] Wr Shiv Karnandi: ಕವಯತ್ರಿ: ಪ್ರೇಮಾ ಉದಯಕುಮಾರ್
ಕವಿತೆ:ಬಾಳ ಸಂಜೆ

ಸರಾಗವಾಗಿ ಮೂಡಿಬಂದ ಕವಿತೆಯಿದು, ನನಗೆ-ನೀನು, ನಿನಗೆ-ನಾನು ಮಕ್ಕಳು ತಮ್ಮ ತಮ್ಮ ಪಾಡಿಗೆ ಎನ್ನುವ ಮೊದಲ ಚರಣದಲ್ಲೆ ಕವಿತೆ ಆಶಯ ತುಂಬಿಕೊಂಡಿದೆ.....ಸುಂದರವಾಗಿ ಹೆಣೆದಿರುವ ಕವಿತೆಯಿದು...

ಧನ್ಯವಾದಗಳು
*ಶಿವಕುಮಾರ ಕರನಂದಿ*🖋
[12/21/2018, 5:27 PM] Wr Dinesh Sir: *ಪ್ರೇಮ್ ರವರ*

ಬಾಳ ಸಂಜೆ.

ಸುಂದರವಾದ ಕವಿತೆ.ಜೀವನದ ಅರ್ಥವನ್ನು ಸಾರುವ ವೇದನಾಭರಿತ ಕವಿತೆ. ಮರಿ ಮಕ್ಕಳು ಎಲ್ಲ ತಮ್ಮ ತಮ್ಮ ದಾರಿ ಹಿಡಿದಾಗ ಅಗುವ ನೋವನ್ನು ಸಹಿಸುವ, ಸ್ಫೂರ್ತಿಯೆರೆವ ಕವಿತೆ ಸೊಗಸಾಗಿದೆ ಮೆಡಮ್.

👌👌👌👍👍👍👍
[12/22/2018, 9:50 AM] Wr Siraj Ahmed Soraba: ಪ್ರೇಮ್ ಸೋದರಿ
ನಿಮ್ಮ ಗಜಲ್ ಓದುತ್ತಿದ್ದರೆ ಹಸಿಗೂಸು ಆ ಕೊಳಚೆ ಗಟಾರಿನಿಂದ ಎದ್ದು ಬಂದು ಕ್ರೂರಿಗಳಿಗೆ ಹೇಳಿದಂತಾಗುತ್ತಿದೆ
ಮುಗಿಯಿತೆನ್ನ ಬದುಕು ಎಂಬ
ಈ ರದೀಫ್ ಬಹಳ ಅಥ೯ಪೂಣ೯ವಾಗಿದೆ ಅದಕ್ಕೆ ತಕ್ಕಂತೆ ಕಾಫಿಯಾಗಳು ಮನಕಲಕುವ ಗಜಲ್ ಇದು

ಆದರೆ ಸೋದರಿ ತಾವು ಗಮನಿಸಿಲ್ಲವೆಂದು ಕಾಣುತ್ತಿದೆ
ಇವತ್ತು ನೀಡಿದಂತಹ ವಿಷಯ
ಚಿತ್ರಕ್ಕಾಗಿ ಕವನ ಬರೆಯುವುದು

ಹೃತ್ಪೂರ್ವಕ ಅಭಿನಂದನೆಗಳು
ಯು ಸಿರಾಜ್ ಅಹಮದ್ ಸೊರಬ
[12/22/2018, 10:01 AM] Wr Siraj Ahmed Soraba: ಪ್ರೇಮ್ ಸಹೋದರಿ ನಿಮ್ಮ ಅಮೂಲ್ಯವಾದ ಭಾವನೆಗಳು
ಚೆನ್ನಾಗಿವೆ ಆದರೆ ಕಾಫಿಯಾಗಳು

ಮೂರನೇ ಶೇರ್ ನಿಂದ ಬದಲಾಗಿವೆ ಗಮನ ಕೊಡಿ
ನೀಗಲು
ಸವ೯ರಿಲು
ಇದರಲ್ಲಿ ಲು
ಎನ್ನುವುದು ರವಿಯಾಗಿದ್ದರೆ
ಎಲ್ಲಾ ಕಾಫಿಯಾ ಕೊನೆ ಶಬ್ದ
ಲು ಆಗಿರಬೇಕು

ಯು ಸಿರಾಜ್ ಅಹಮದ್ ಸೊರಬ
[12/22/2018, 12:21 PM] Wr Shamily Praveen Bedra: *@ಪ್ರೇಮ್@ * ಅವರ *ಗಝಲ್-60* ಓದುವಾಗ ಅಯ್ಯೋ ಅನ್ನಿಸಿತು.. ಎಷ್ಟೊಂದು ಆಸೆಗಳು ಆ ಕರುಳನ್ನು ಸುತ್ತಿಕೊಂಡು ಸ್ವಲ್ಪ ಸ್ವಲ್ಪವೇ ಉಸಿರಾಡುವಾಗ?? ಅದಾವುದೂ ಈಡೇರುವುದೇ ಇಲ್ಲ ಎಂದು ಬಹುಶಃ ಅದಕ್ಕೆ ತಿಳಿದಿದ್ದರೆ ಇನ್ನಾವುದೋ ಭಾವತಳೆದು ಅಲ್ಲೇ ಸಾಯುತ್ತಿತ್ತೇನೋ?? ಚೆನ್ನಾಗಿದೆ..
[12/24/2018, 6:55 AM] Wr 100 Ahmd: ನಮಸ್ತೆ ಪ್ರೇಮಜಿ 🙏🙏🙏

ಒಂದು ಸುಂದರವಾದ ಗಝಲ್ ಮನಸಿಗೆ ಹೆಚ್ಚು ಇಷ್ಟವಾಯಿತು ಎಲ್ಲ ನಿಯಮಗಳನ್ನು ಸರಿಯಾಗಿ ಬಳಸಿಕೊಂಡು ಸೊಗಸಾಗಿ ಬರೆದಿದ್ದೀರಿ
ಭಾವನೆಗಳನ್ನ ಒಂದೆ ಕಡೆಕೇಂದ್ರೀಕರಿಸಿ ಬರೆಯಲು ಪ್ರಯತ್ನಿಸಿ

ಕೊನೆಯ ಶೇರನಲ್ಲಿ ಪ್ರೀತಿಗಿಂತಲು ಆಸ್ತಿಗಾಗಿ ಮೊರೆಹೋಗಿದ್ದೀರಿ
ಸಂಪೂರ್ಣವಾಗಿ ಭಾವ ಭವಿಷ್ಯ ಪದಗಳಲಿ ಹಿಡಿದಿಡುವ ಪ್ರಯತ್ನ ಚನ್ನಾಗಿದೆ

ಮನಸಿಗೆ ಬೇಸರಿಕೊಳ್ಳದೆ ಈ ಅಲ್ಪ ಬುದ್ಫಿಗೆ ಒಮ್ಮೆ ಕ್ಷಮಿಸಿ ಬಿಡಿ
🙏🙏🙏🙏🙏🙏🙏🙏

ನೂರಅಹ್ಮದ ನಾಗನೂರ
[12/25/2018, 2:53 PM] Wr 100 Ahmd: ಪ್ರೇಮ್ ಅಕ್ಕಾ🙏

ಅಚ್ಚುಕಟ್ಟಾಗಿ ನಿಯಮಾನುಸಾರ ಗಝಲ್ ಸೊಗಸಾಗಿದೆ

ಶೃಂಗಾರ ಅಷ್ಟೊಂದು ಕಂಡು ಬರಲಿಲ್ಲ

ಪದಗಳ ಲಾಲಿತ್ಯ ನರ್ತನ ಬಲು ಸೊಗಸಾಗಿದೆ

ತಿಳಿಯಲು ಸ್ವಲ್ಪ ಮಟ್ಟಿಗೆ ಸಮಯಬೇಕು ಎನಿಸಿತು

ಚನ್ನಾಗಿ ಗ್ರಹಿಸಿ ಆಲಿಸಿದಾಗ ತಿಳಿಯುವ ಭಾಷೆ

ಮತ್ತೇನು ಹೇಳಲಾರೆ
🙏🙏🙏🙏🙏🙏🙏🙏

ನೂರ್
[12/25/2018, 3:57 PM] Wr Siddesh: *ಪ್ರೇಮ್ ಮೇಡಮ್* *ಗಜಲ್*

*ನೀ ಧರೆಗೆ ಇಣುಕುವ ಕ್ಷಣ ...ನನಗೆ ಆನಂದ ..ನಿನ್ನ ಕಿರಣವ ಬೀರಿದ ಗಳಿಗೆಯದು ವದನಕಾನಂದ*

ಸೂರ್ಯೋದಯದ ಕ್ಷಣಗಳ ...ರಸವತ್ತಾಗಿ ವರ್ಣಿಸಿದ ಕವಯತ್ರಿ ...

*ಪಳ ಪಳ ಹೊಳೆವ ಹೊಂಬಣ್ಣದ ಕಿರಣ ರಾಶಿ ...ಕಣ್ಣ ತಿವಿಯುತಲಿ ಬರುತಿರಲದು ನಯನಕಾನಂದ*

ಪ್ರೀ ತಿಯಿಂದ ನನ್ನ ನೋಡೆ ...ನೀ ಬರೊದು ..
ನೀ ಪ್ರೇಮದಿಂದ .. ನನ್ನ ಸೇರಲು ಅವನಿಗಾನಂದ

*ಸೂಪರ್*
[12/26/2018, 11:28 AM] Wr Siraj Ahmed Soraba: ಪ್ರೇಮ್ ಸಹೋದರಿ

ಸುಂದರ ಸಾಲುಗಳು ನಿಯಮಬದ್ಧವಾದ ಗಝಲ್
ತಾಯಿ ಭಾರತಿಯ ಹಿರಿಮೆ ಗರಿಮೆಗಳನ್ನು ಮನೋಜ್ಞವಾಗಿ ಬರೆದಿದ್ದೀರಿ ಹೃತ್ಪೂರ್ವಕ ಅಭಿನಂದನೆಗಳು

ಯು ಸಿರಾಜ್ ಅಹಮದ್ ಸೊರಬ
[12/26/2018, 11:46 AM] ‪+91 99001 39965‬: ಪ್ರೇಮ್ ರವರೆ , ,
ಸಾಗರದ ಅಲೆಯು ರಮೇಯ ಒಲವು ಎಂಬ ಒಂದು ಸಾಲಲ್ಲಿ , ಭಾರತಾಂಬೆಯ ಮತ್ತು ಭಾರತೀಯರ ಇಡಿ ಗುಣಗಾನ ವಾಗಿದೆ ಎಂದೆನಿಸುತ್ತಿದೆ . ಶ್ರೇಷ್ಠ ರನ್ನು ಪ್ರೀತಿಸುವ,  ದುಷ್ಟರನ್ನು ದ್ವೇಷಿಸುವ ಮತ್ತು ಶಿಕ್ಷಿಸುವ ಸಂಯಮ ಮತ್ತು ಶೌರ್ಯ ಎರಡೂ ಭಾರತೀಯರಲ್ಲಿದೆ  ಅಲ್ಲವೇ. ಇಡಿ ಗಝಲ್ ಚನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು
[12/26/2018, 12:35 PM] ‪+91 91415 05789‬: ಪ್ರೇಮ್ ಜೀ🙏🏼

ಎಲ್ಲರನ್ನೂ...ಪೊರೆವ ..ಸಲಹುವ ತಾಯಿ ಭಾರತಿಯಯನ್ನು ಬಹಳ ಚೆನ್ನಾಗಿ ಸುಂದರ ಒದ ಪುಂಜ ಗಳಲ್ಲಿ.
ಹೆಣೆದ ಗಝಲ್ ಗೆ

ಧನ್ಯವಾದಗಳು🙏🏼💐
ಎಸ್
ನಾಗಮ್ಮ🌹
[12/26/2018, 12:44 PM] Wr Sham Prasad Bhat: ಗಝಲ್-62

@ಪ್ರೇಮ್//

ಭಾರತಾಂಬೆಯನ್ನು ದೇವಿಗೆ ಹೋಲಿಸುತ್ತಾ  ಅವಳು ಒಲವ ಸುರಿಸಿವವಳು, ಕ್ಷಮೆಯ ನೀಡುವವಳು ಎಂಬ ಆಶಯದೊಂದಿಗೆ ಆರಂಭ..

ಕರುಣಾಮಯಿ, ಆಗರ್ಭ ಶ್ರೀಮಂತೆ ನೀನು, ನಿನ್ನೊಡಲೆಂಬ ಕಡಲಲ್ಲಿ ಸಿರಿತನ ತುಂಬಿ ತುಳುಕಿದೆ...ಜಲದೊಡತಿ ಗಂಗೆಯನ್ನು ಹೊತ್ತಿರುವ ತಾಯಿ ಭಾರತಿ ಅಸಾಮಾನ್ಯಳು..
ಮಕ್ಕಳೆಂದರೆ ತಾಯಿ ಭಾರತಿಗೆ ವಿಷೇಶ ಅಕ್ಕರೆಯಿದೆ..ನಾವೆಲ್ಲರೂ ಅವಳ ಮಕ್ಕಳು..

ನಿನ್ನುದರದಲ್ಲಿ ನಮ್ಮ ಹೊತ್ತು ಸಲಹಿದವಳು,ಪ್ರೀತಿ ಯ ಒರತೆ ಹರಿಸಿದವಳು..ಗುಣಗಾನ ಚೆನ್ನಾಗಿ ಸಾಗಿದೆ..

ದೇಶಭಕ್ತಿ ಗೆ ಸ್ಪೂರ್ತಿ ಅವಳು ಎನ್ನುತ್ತಾ  ನಿಯಮಾನುಸಾರ ಹೆಣದ ಗಝಲ್ ಚೆನ್ನಾಗಿದೆ.👆🏽👍🏻👌🏻🙏🏾
[12/26/2018, 1:52 PM] Wr Dinesh Sir: 🙏🙏
*ಪ್ರೇಮ್ ರವರ*

ಗಜ಼ಲ್.

ವ್ಹಾವ್ ಬಲು ಸೊಗಸಾಗಿ ಮೂಡಿಬಂದಿದೆ ಎನ್ನುವುದರಲ್ಲಿ ಅನುಮಾನವೆ ಇಲ್ಲ. ರಚನೆ ಸೂಪರ್ಬ್..ತಾಯಿ ಭಾರತಮಾತೆಯ ಮಹಿಮೆಯನ್ನು ಗಜ಼ಲ್ ನಲ್ಲಿ ಮುದ್ದಾಡಿದ ಬಗೆ ಅದ್ಭುತವಾಗಿದೆ.. ಇಷ್ಟ ಆಯ್ತು ಗಜ಼ಲ್.

👌👌👌👍👍💐💐💐
[12/31/2018, 7:17 AM] Wr Shivaprasad Aradhya: ಪ್ರೇಮ ರವರು ನಮ್ಮೂರಿನ ಅಂಗನವಾಡಿ ಮೇಡಂ ಕತೆಯನ್ನೇ ಬರೆದ ಹಾಗಿದೆ.ಪಕ್ಕದ ಮನೆಯಲ್ಲೇ ಬಾಡಿಗೆಗಿದ್ದು ಕೆಲಸದಲ್ಲಿದ್ದ ಯುವಕ ಅವಳ ಮದುವೆಯಾಗಿ ಆರು ತಿಂಗಳ ನಂತರ ಪರಾರಿ.ಆಕೆ ಇಂದು ಮಗನ ಬೆಳೆಸಿ ಇಂಜಿನಿಯರ್ ಮಾಡಿ ದೊಡ್ಡ ಮನೆಯಲ್ಲಿ ಮೊಮ್ಮಕ್ಕಳೊಡನೆ ಸುಖವಾಗಿದ್ದಾರೆ.ನನಗೂ ಅವರ ಅಂಗನವಾಡಿ ತುಂಬಾ ಚಿತ್ರ ಬರೆವ ಕೆಲಸ ಕೊಟ್ಟಿದ್ದಾರೆ.

ಶಿವಪ್ರಸಾದ್ ಆರಾಧ್ಯ ನೆಲಮಂಗಲ
[12/31/2018, 7:18 AM] Wr Shivaprasad Aradhya: ಪ್ರೇಮರವರೇ ನ್ಯಾನೋ ಕತೆ ಮಾರ್ಮಿಕ ಚಿತ್ರಣ .ಚೆನ್ನಾಗಿ ಮೂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ