ಪ್ರೀತಿಯಿರಲಿ
ನನಗೆ ಬೇಡ ನಿಮ್ಮ ಕರುಣೆ!
ಬೇಕು ಸಹಾನುಭೂತಿ, ಸಲಹೆ,
ಸಹಕಾರ, ವಿನಮ್ರತೆ, ಸಹಾಯ!
ಚಿಂದಿ ಆಯುವ ಹುಡುಗಿ ನಾನು//
ಕೆಟ್ಟ ದೃಷ್ಟಿಯಿಂದ ನೋಡದೆ,
ಪ್ರೀತಿಯಿರಲಿ ಮನುಜರಂತೆ!
ತಂದೆ ತಾಯಿಯ ಮುಖವ ನೋಡದ,
ಚಿಂದಿ ಆಯುವ ಹುಡುಗಿ ನಾನು//
ನನ್ನ ಕನಸು ನನಗೇ ಮೀಸಲು!
ನಿಮ್ಮ ಒಲವದು ನನಗೆ ಬೇಕಿದೆ!
ಪ್ರೇಮವರಿಯದ ಬಾಲೆ ಬದುಕಿದು,
ಚಿಂದಿ ಆಯುವ ಹುಡುಗಿ ನಾನು//
ಕೊಳಚೆ ಮಕ್ಕಳೇ ನನ್ನ ಮಿತ್ರರು!
ಶಾಲೆ ಮೂಲೆಯ ನೋಡದವರು!
ಪಾಠ ಪುಸ್ತಕ ಏನೂ ಅರಿಯದ,
ಚಿಂದಿ ಆಯುವ ಹುಡುಗಿ ನಾನು//
@ಪ್ರೇಮ್@
ಪ್ರೇಮಾ ಉದಯ್ ಕುಮಾರ್
ಸಹಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು
ಸುಳ್ಯ ದ.ಕ 574239
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ