ಪರಿಸ್ಥಿತಿ
'ಹೇಗಿದ್ದೆ ನಾ' ಯೋಚಿಸುತ್ತಿದ್ದ ಕಿರಣ್ ರಾವ್ ಗೆ ತಲೆ ಕೆಟ್ಟಿತ್ತು. ಒಂದು ಕಾಲದಲ್ಲಿ ಇಪ್ಪತ್ತು ಜನರನ್ನು ಕೆಲಸಕ್ಕಿಟ್ಟು ದುಡಿಸಿ, ಸಂಬಳ ಕೊಡುತ್ತಿದ್ದವ ಇಂದು ಬದುಕಲು ಆಟೋ ಚಾಲಕ! ಕಾರು, ಚಿನ್ನ, ಹಣ ಎಲ್ಲಾ ತನ್ನ ಶೋಕಿ ಜೀವನ ನುಂಗಿತು. 'ನನಗೀಗ ಸಿಂಪಲ್ಲಾಗಿ ಸಾಧಾರಣರಂತೆ ಬದುಲಾಗುತ್ತಿಲ್ಲ! ಆದರೂ ಬದುಕಬೇಕಿದೆ. ನನ್ನನ್ನು ನಂಬಿದ ಕುಟುಂಬಕ್ಕಾಗಿ. ಕಷ್ಟದಲ್ಲಿ ಸಹಾಯಕ್ಕೆ ಯಾರೂ ಬರಲಾರರು' ಎಂದುಕೊಂಡ ಕಿರಣ್ ರಾವ್ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅರ್ಜಿ ತುಂಬುತ್ತಿದ್ದರು, ಬಾಡಿಗೆ ಮನೆಯಲ್ಲಿ ಕುಳಿತು!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ