ಹರಟೆ
ರಾಧೆ ನಿನಗೆ ರಮಿಸಲಾರೆ ನನ್ನ ಒಡತಿ ನೀನೇ
ಕೃಷ್ಣ ನಿನ್ನ ನಂಬಲಾರೆ ರುಕ್ಮಿಣಿ ಇಹಳು ತಾನೇ..
ನೋಡು ಒಡತಿ ರಾಮನೆಂದೂ ಏಕಪತ್ನಿ ವೃತಸ್ಥನಲ್ಲವೇ
ಕೃಷ್ಣನಿಗೆ ಹದಿನಾರು ಸಾವಿರ ಎಂಬ ಮಾತೆ ಇಲ್ಲವೇ..
ಸಲ್ಲಾಪವೇಕೆ ಗೆಳತಿ ನೀನು ಬಳಿಗೆ ಬರಬಾರದೇ
ತುಂಟ ನೆಪವ ಹೇಳಿ ನೀನು ಅವಳ ಬಳಿಗೆ ಓಡುವೆ..
ಗೆಳೆಯ ಗೆಳತಿ ಅನೇಕರಿಹರು, ೃೃೃೃೃೃನೀನೆ ನನ್ನ ಬಾಳಿಗೆ
ಮಾರು ಹೋಗೆ ನಾನು ಇಂದು ನಿಮ್ಮ ಈ ಸುಳ್ಳಿಗೆ..
ಮಾತು ಬೇಡ, ಮುದ್ದು ಬೇಕು ನನ್ನ ಚೆಲುವೆ ಬಾರೆಯಾ
ಏನ ಕೊಡುವೆ ನನಗೆ ನೀನು ಈಗಲೇ ತೋರೆಯಾ.
ಹಟವು ಬೇಡ ನಾನೆ ನಿನಗೆ , ಪ್ರೀತಿ ಬೇಕು ನಿನ್ನದು ತಿಳಿಯೆ ನೀನು , ೃಸದಾ ಬದುಕಲಿ ನನ್ನ ಪ್ರೀತಿ ನಿನ್ನದು..
ಬಾರೆ ಬಳಿಗೆ ಸರಸವಾಡೆ ನನ್ನ ಮುದ್ದು ನಲ್ಲೆಯೇ
ನನ್ನ ಜೀವ ನೀನೆ , ಎಂದು ನಾನು ಇರುವೆ ನಿನ್ನಲ್ಲಿಯೇ..
@ಪ್ರೇಮ್@
11.02.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ