ಕಲಿಕೆ
ಕಲಿತು ಕಲಿಯಬೇಕು ಎಷ್ಟೇ ಕಲಿತಿದ್ದರೂ ಕೂಡಾ..
ಕಲಿತದ್ದೆಷ್ಟಾದರೂ ಅದು ಅಲ್ಪವೇ ..
ಇನ್ನೂ ಇದೆ ಕಲಿಯಲು ಕೊನೆತನಕ..
ಯಾವುದನ್ನೂ ಪೂರ್ಣ ಕಲಿಯಲಾರೆವು..
ಕಲಿತಿಲ್ಲದ ವಿಷಯದ ಅಲ್ಪ ಜ್ಞಾನಕ್ಕಾದರೂ ಕಲಿಯಬೇಕು..
ಕಲೆ, ಸಾಹಿತ್ಯ, ಸಂಸ್ಕೃತಿ ಅಧ್ಯಯನ..
ನೃತ್ಯ, ಗಾಯನ, ಬರವಣಿಗೆ, ಚಿತ್ರಕಲೆ
ಕಂಪ್ಯೂಟರ್, ವೇದ, ಗಣಿತ, ಇತಿಹಾಸ
ಸತ್ವಗಳು, ತತ್ವಗಳು, ವಾಕ್ಯಗಳ ಕಲಿಕೆ,
ಪೂಜೆ, ಔಷಧಿ, ರೋಗ ನಿವಾರಕ ಕಲಿಕೆ.
ಕರಕುಶಲ, ಅಡಿಗೆ, ಸ್ವಚ್ಛ ಅಭ್ಯಾಸ
ಮನೆ, ಕಛೇರಿ ನಿರ್ವಹಣೆ ಹೊಣೆಗಾರಿಕೆ
ಚಾಲನೆ, ಕಛೇರಿ ಕೆಲಸಗಳು, ಮನೆಕೆಲಸ
ದಾಖಲೆ, ನಿಯಮ, ರಕ್ಷಣೆ, ನೀತಿ...
ಕಲಿತಷ್ಟು ಮುಗಿಯದ ವಿದ್ಯೆಗಳಿವೆ ಜಗದೊಳು
ಕೆದಕಿದಷ್ಟು ಆಳ, ಕಲಿತಷ್ಟು ಅಗಲ ಮನದಾಳ
ಕಲಿಯೋಣ ಇತರರೊಡಗೂಡಿ
ನೆಮ್ಮದಿಯ ಬಾಳ ಬಾಳಲು ಕಲೆಯೋಣ..
ಇತರರ ಬದುಕ ಬಿಟ್ಟು, ನಾವೂ ಕಲಿಯೋಣ..
@ಪ್ರೇಮ್@
10.2.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ