ಗುರುವಾರ, ಫೆಬ್ರವರಿ 7, 2019

754. ನ್ಯಾನೋ ಕತೆ-15 ಕೆಲಸ

ನ್ಯಾನೋ ಕತೆ

ಕೆಲಸ

"ದಿನ ಪೂರ್ತಿ ದುಡಿದರೂ ಅಂಗಡಿ ಬಾಡಿಗೆ ಕಟ್ಟಲಾಗದ ನಿನಗೇಕೆ ಕೆಲಸ ಮನೇಲೇ ಅಡಿಗೆ ಮಾಡ್ಕೊಂಡು ಬಿದ್ದಿರು" ಅಂತ ಹೆಂಡತಿಯ ಕೆಲಸ ಬಿಡಿಸಿ ಮನೇಲಿರಿಸಿದ ಗಂಡನಿಗೆ ಒಂದು ತಿಂಗಳಲ್ಲೆ ಗೊತ್ತಾಯ್ತು ಮಡದಿಯ ದುಡಿತದ ಮಹಿಮೆ!
  ಪ್ರತಿದಿನ ರೂ. ಐನೂರು ಹೆಂಡತಿಯ ಕೈಗಿರಿಸುವುದರ ಜೊತೆಗೆ ಮನೆಗೆ ಬೇಕಾದ ತಿಂಡಿ, ಸಾಮಾನು, ಅಕ್ಕಿ, ಬೇಳೆ, ಮಕ್ಕಳಿಗೆ, ಹೆಂಡತಿಗೆ ಬಟ್ಟೆ, ಪೇಸ್ಟ್ ಬ್ರಶ್, ಪೆಟ್ರೋಲ್ ಬೆಲೆ, ಬಸ್ಸು, ಆಟೋ ಚಾರ್ಜು, ಮಕ್ಕಳ ಪುಸ್ತಕ, ಪೆನ್ನು, ಫೀಜು,
ಚಾಕ್ಲೇಟ್ ಹಣವನ್ನೂ ತಾನೇ ಭರಿಸಿ ಸುಸ್ತಾಗಿ ಕೈ ಚೆಲ್ಲ ಬೇಕಾದಾಗ ಹೆಂಡತಿಗೆ ಕೆಲಸ ಹುಡುಕಲು ಪ್ರಾರಂಭಿಸಿದ..!
@ಪ್ರೇಮ್@
07.02.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ