ನಿನಗರ್ಪಣೆ ನನ್ನ ಪ್ರೀತಿ
ಪ್ರೇಮವೆಂದರೆ ಪ್ರೀತಿಯಂತೆ
ಪ್ರೇಮವೆಂದರೆ ಭಕ್ತಿಯಂತೆ
ಓ ದೇವನೆ ನನ್ನುಸಿರ ಕಾದು
ನನ್ನೆದೆಬಡಿತ ನಡೆಸುವವ
ನೀನಂತೆ..
ನನ್ನುಸಿರ ಉಸಿರು ನೀನು
ನನ್ನ ನೆಲದ ಹಸಿರು ನೀನು
ನನ್ನ ಹೂನಗೆಯ ಸಿರಿಯು ನೀನು
ನನ್ನ ಮನದ ಭಾವ ನೀನು..
ನನ್ನ ಸಮಯದ ಮುಳ್ಳು ನೀನು
ನನ್ನ ಹೃದಯದ ಪದವು ನೀನು
ರಾತ್ರಿ ಕಾಣುವ ಕನಸು ನೀನು
ಹಗಲು ನಡೆಯುವ ರಸ್ತೆ ನೀನು...
ಮನದ ಬಾಗಿಲ ತೆರೆವೆ ನೀನು
ಹೃದಯ ಪಟದಲಿ ಬೆಳೆವೆ ನೀನು
ನನ್ನ ಕಾರ್ಯದ ಗರಿಯು ನೀನು
ದಿನದ ಸುಖ ದುಃಖದ ದೊರೆಯು ನೀನು
ಉಸಿರಿನಾಟದ ಸೂತ್ರದಾರ ನೀನು
ಬದುಕಿನಾಟದ ರೂವಾರಿ ನೀನು
ಜನರ ಮಿಳಿತದ ವೈಖರಿಯು ನೀನು
ಸೋಲು ಗೆಲುವಿನ ಪರಿಯು ನೀನು..
ನಾನು ನಿನ್ನನೆ ಸದಾ ಪ್ರೀತಿಸುವೆ
ನಿನ್ನಿಂದ ಸಕಲ ಸುಖವ ಪಡೆವೆ
ನಿನ್ನೊಂದಿಗೆ ಅನುಕ್ಷಣವ ಕಳೆವೆ
ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ನೀನಾಗಿರುವೆ..
ನನ್ನ ಕಾಯುವ ದೈವ ನೀನೇ
ನನ್ನ ಪೊರೆಯುವ ತಂದೆ ನೀನೇ
ಪ್ರೀತಿ ನೀಡುವ ತಾಯಿ ನೀನೇ
ನೀತಿ ಹೇಳುವ ಗುರುವು ನೀನೇ..
@ಪ್ರೇಮ್@
14.02.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ