ಸೋಮವಾರ, ಫೆಬ್ರವರಿ 25, 2019

800. ವಿಮರ್ಶೆ-4

4. ಛತ್ರದ ಸರ್ ರ

*ದುಗುಡ*

ಮನೆಯ ಕೀಯು ಕಳೆದು ಹೋಗಿ
ಮನದ ಕದವು ಮುಚ್ಚಿವೆ
ದುಗುಡವಡರಿ ಮಸುಕು ಮೆತ್ತಿ
ಚಿಂತೆ ನೂರು ಹೆಚ್ಚಿವೆ  ೧
🍊🍊🍊🍊🍊🍊🍊

ನಿಮ್ಮ ಪದ ಬಳಕೆಗೆ ನೀವೇ ಸಾಟಿ ಸರ್. ಕವನ ಓದುಗರನ್ನು ಎಳೆದುಕೊಂಡು ಹೋಗುವಂತೆ ಬರೆಯುವ ಜಾಣರು ನೀವು. ಸರಳ ಪದದಲೂ ಸಾಹಿತ್ಯ ಉಣಬಡಿಸುವ ಸರದಾರ.

🍊🍊🍊🍊🍊🍊🍊🍊

ಸಮಯದೊಳಗೆ ತಲುಪ ಬೇಕು
ಏರುತಿರುವ ಒತ್ತಡ
ಶೂನ್ಯ ಮನದ ಚಲನೆಯಲ್ಲಿ
ಎಡವಿ ಹರಿದ ಎಕ್ಕಡ  ೨

🍊🍊🍊🍊🍊🍊🍊

ಶೂನ್ಯ ಮನದ ಚಲನೆ...ಇಷ್ಟವಾಯ್ತು ಸಾಲು. ಕೀ ಕಳೆದುಕೊಂಡು ಒತ್ತಡವೇರಿದ ಮನುಜನ ಮನ ಶೂನ್ಯವಾಗಿ ಕೋಪ, ಸಿಟ್ಟು, ಆವೇಶ, ಹತಾಶೆ ಒಟ್ಟಿಗೆ ಆವರಿಸಿಬಿಡುವುದು.

🍊🍊🍊🍊🍊🍊🍊

ಮರೆವು ಅರಿವ ತಿರುಳ ನುಂಗಿ
ನೆರೆತ ಕಚವು  ಕೆದರಿದೆ
ಮೋಡ ಮರೆಯ ಚಂದ್ರನಂತೆ
ಕಂಡು ಮತ್ತೆ ಸರಿದಿದೆ  ೩
🍊🍊🍊🍊🍊🍊🍊🍊

ಕಚ ಪದದ ಅರ್ಥ ತಿಳಿದಿಲ್ಲ.
ಉತ್ತಮ ಪದ ಲಯ.

🍊🍊🍊🍊🍊🍊🍐

ಚಿತ್ತ ಹಿಡಿದು ಕಟ್ಟಿ ಹಾಕಿ
ಶಾಂತ ಮಾಡಿ ಕೇಳಿದೆ
ಜಗವ ಗೆದ್ದ ಚಕ್ರವರ್ತಿ
ಬಾಹುಬಲಿಯ ಗೆಲ್ಲದೆ ೪

🍊🍊🍊🍊🍊🍊

ಖಂಡಿತ. ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು. ನಿಮ್ಮ ಮಾತು ಸತ್ಯ.
ರೂಪಕ ಸೂಕ್ತ.

🍊🍊🍊🍊🍊🍊🍊

ಬಗಲಿನೊಳಗೆ ಕೂರಿಯಿಟ್ಟು
ಊರನೆಲ್ಲ ಅಲೆದನು
ಜೇಬಿನಲ್ಲೇ ಚಾವಿ ಕಂಡು
ಪೆದ್ದು ನಾಚಿ ನುಲಿದನು ೫
🍊🍊🍊🍊🍊🍊
ನುಲಿಯುವುದೆಂದರೇನು? ಗೊತ್ತಾಗಲಿಲ್ಲ ಸರ್..ಕೂರಿ ಪದದ ಅರ್ಥ ತಿಳಿದಿಲ್ಲ..
ಪ್ರಾಸಬದ್ಧ ಕವನ . ಹಾಡುವಂತಿದೆ.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ