ಶಿಶುಗೀತೆ
ರವಿ ಬಂದ
ರವಿ ಮೂಡಿ ಬಂದ
ರವರವ ಪಕ್ಷಿಗಾನ ತಂದ
ರಥದಿ ಕಿರಣ ಬೀರಿದ
ರಮ್ಯ ಬಾಳು ತರಿಸಿದ//
ರಾಗ ನೂರು ಹಾಡುತ
ರಾಜಿಯಾಗಿ ಬಾಳಿರೆನುತ
ರಾಜನಂತೆ ಮೆರೆಯುತ
ರಾಷ್ಟ್ರದಾದ್ಯಂತ ರಾರಾಜಿಸುತ//
ರೋಚಕದ ಮನದಲಿ
ರೋಗ ಬಾರದೆಂಬ ದಿಸೆಯಲಿ
ರೋಮಾಂಚನವಾಗುವ ಹಾಗೆ
ರೋಷ ದೂರ ಸರಿಸಿರೆನುತಲಿ//
ರೂಪ ಲತೆಗೆ ಬೆಳಕ ನೀಡಿ
ರೇಶ್ಮೆಯಂಥ ಕಿರಣ ಬೀರಿ
ರೈಲಿನಂತೆ ಭೂಮಿಯೆಡೆಗೆ ವೇಗವಾಗಿ
ರಂಗೇರಿ ರವಿ ಬಂದ
ರಂಗಿನ ಕಳೆ ನಮಗೆ ತಂದ//
@ಪ್ರೇಮ್@
*ರ* ಕಾರದಲ್ಲಿ
*ರ* ಮಣೀಯ ಕವಿತೆ
*ರ* ವಿಯುದಯದ
*ರ*Oಗನು ಎದುರಿರಿಸಿತು..
*ರ* Oಜಿಸಿತು ಮನವ ಕವಿತೆ
👌👌👌👌👍👍
ದಿನೇಶ್ ಸರ್
ಕವಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ