ಗಝಲ್-66
ರಾತ್ರಿಯಲಿ ಚಕಚಕನೆ ಮಿನುಗುವ ಚುಕ್ಕಿ
ಕುಣಿಯುತಲಿ ಹರುಷವನು ಹರಡುವ ಚುಕ್ಕಿ ..
ಬೆಳಕಿಲ್ಲದಾಗ ಸಹಾಯವನು ನಾವು ಹಾಕಬೇಕು
ಸಹಾಯದ ಹಸ್ತವ ನೀಡುವ ಚುಕ್ಕಿ..
ಮಳೆ ಬರುವ ರಾತ್ರಿಯಲಿ ಅಡಗುವೆ ನೀನು
ಮೋಡದೊಡನೆ ಚಕ್ಕನೆ ಆಟವನಾಡುವ ಚುಕ್ಕಿ..
ಹಲವಾರು ಗ್ರಹಗಳಿಗೆ ಬೆಳಕೀವೆ ನೀನು
ಬಾನಿಂದಲೆ ಮನಸಿಗೆ ಮುದ ನೀಡುವ ಚುಕ್ಕಿ..
ಹಿರಿಯರೆಲ್ಲ ಮೇಲೆ ಹೋಗಿ ಆಗುವರು ನಿನ್ನಂತೆ
ಕಿರಿಯರೆಲ್ಲ ಒಟ್ಟಾಗಿ ಕೈಮುಗಿಯುವ ಚುಕ್ಕಿ...
ಕೈಯಲ್ಲಿ ಹಿಡಿಯಲಾರೆ, ಬೊಗಸೆಯಲ್ಲಿ ಬರಲಾರೆ
ಹೊಳೆಯುತಲಿ ಹಿತವ ನೀಡುವ ಚುಕ್ಕಿ...
ಪ್ರೀತಿಯಿಂದ ಬಾಳಬೇಕು ಅಲ್ಲವೇ ನಾವು
ಸಂಘಜೀವಿಯಾಗಿ ನಾವು ಬದುಕುವ ಚುಕ್ಕಿ..
@ಪ್ರೇಮ್@
15.02.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ