ಕವಿಗೋಷ್ಟಿಯ ಪಜೀತಿ
ಹೋಗಿದ್ದೆನೊಂದು ರಾಜ್ಯ ಮಟ್ಟದ ಕವಿಗೋಷ್ಟಿಗೆ
ನೋಂದಾಯಿಸಿದ್ದೆ ಹೆಸರ ಎಲ್ಲರಿಗಿಂತ ಮೊದಲಿಗೆ
ಪರಿಚಯವಿರಲಿಲ್ಲ ನನ್ನದು ಸಂಘಟಕರಿಗೆ
ಕರೆಸಿರಲಿಲ್ಲ ಸರಿಯಾಗಿ ನಿಭಾಯಿಸುವ ನಿರ್ವಾಹಕರಿಗೆ...
ಶುರುವಾಯಿತು ಉದ್ಘಾಟನಾ ಸಮಾರಂಭದ ಪಾಲು
ಮುಗಿದಾಗ ಗಂಟೆ ಆಗಿತ್ತು ಸರಿಯಾಗಿ ಎರಡು ಕಾಲು..
ನೂರು ಕವಿಗಳಿಗಿತ್ತು ಅಲ್ಲಿ ಪಾಲು ಅಲ್ಲಿತ್ತು ಅವರ ಸಾಲು..
ಕಾದವರ ಸಮಯ ಎಲ್ಲವೂ ಸುಮ್ಮನೆ ಹಾಳು..
ಮತ್ತೆ ಬಂತು ಮಧ್ಯಾಹ್ನ ಊಟದ ವಿರಾಮ
ಹಸಿದು ತಿಂದವ ಬಯಸಿದ ಸ್ವಲ್ಪ ಆರಾಮ
ಪುನಃ ಆರಂಭ ವೇದಿಕೆಯ ಅಂದದ ಅಲಂಕಾರ
ಪ್ರಾರಂಭವಾಗಲು ಗಂಟೆ ಕಳೆದಿತ್ತು ಮೂರು..
ಪರಿಚಯದ ಮುಖಗಳಿಗಿತ್ತು ಮೊದಲ ಪಂಕ್ತಿ..
ನಿಂತು ಕೂತು ಕಾದವ ಆಗಿದ್ದ ಅಲ್ಲೆ ಬಾಕಿ
ವೇದಿಕೆಯೇರಿದರು ಕವಿಗಳು ಒಬ್ಬರನೊಬ್ಬರು ನೂಕಿ
ಬೇಕಿತ್ತ ಹೆಸರಿಗೆ ಇದೆಲ್ಲ ಬೂಟಾಟಿಕೆ ಶೋಕಿ..
ಸಂಘಟಕನಿಗೆ ಪೆಟ್ಟು ಬೀಳೋದೊಂದೆ ಬಾಕಿ.....
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ