ಮಂಗಳವಾರ, ಫೆಬ್ರವರಿ 12, 2019

763. ಭಾವಗೀತೆ-18 ಹೋಗೋರೆಲ್ಲ ಹೋಗಲಿ ಶಾಲೆಗೆ

ಹೋಗೋರೆಲ್ಲಾ ಹೋಗಲಿ

ಒಂದೇ ತರಹದ ಬಟ್ಟೆಯ ತೊಟ್ಟು
ಬೆನ್ನಲಿ ಪಾಟಿಯ ಚೀಲವನಿಟ್ಟು
ಕೈಯಲಿ ಊಟದ ಬುತ್ತಿಯ ಹಿಡಿದು
ಓದು ಬರೆಯುವ ಕೆಲಸವ ಪಡೆದು
ಹೋಗೋರೆಲ್ಲ ಹೋಗಲಿ ಶಾಲೆಗೆ..

ನಾನೂ ಹೋಗುವೆ ಅನ್ನುವೆ ಒಮ್ಮೆ
ಅಪ್ಪನ ಕುಡಿತವು, ಅಮ್ಮನ ಕಷ್ಟವು
ಕೂಳಿಗೂ ಪರದಾಟ, ನಿತ್ಯವು ತಿಣುಕಾಟ
ಪುಸ್ತಕ ಬಳಪಕೆ ಕಾಸು ಎಲ್ಲಿಯದು
ಅಮ್ಮನ ಜೀವಕೆ ಒಂಟಿತನ ಬರಬಾರದು..
ಹೋಗೋರೆಲ್ಲ ಹೋಗಲಿ ಶಾಲೆಗೆ..

ಮುಂದಿನ ಜನುಮದಿ ದೇವನೆ ನನ್ನಯ
ಕರುಣಿಸು ನನಗೆ ಸಿರಿವಂತರ ಹಟ್ಟಿಯ
ನಾನೂ ನಗುತ ಬರೆಯುತ ಆಟವನಾಡುತ
ತೆರಳಲು ಬೇಕು ಬೇಗನೆ ಶಾಲೆಗೆ ಓಡುತ
ಹೋಗೋರೆಲ್ಲ ಹೋಗಲಿ ಶಾಲೆಗೆ..

ಪುಸ್ತಕ ಸ್ಲೇಟನು ಕೈಯಲಿ ಹಿಡಿದು
ಟೀಚರ್ ಎದುರಿಗೆ ತಲೆಬಾಗಿ ನಡೆದು
ಅಮ್ಮ ಅಪ್ಪರಿಗೆ ಖುಷಿಯನು ನೀಡುತ
ಆಟ ಪಾಠದಿ ಬಹುಮಾನವ ಪಡೆದು
ಹೋಗೋರೆಲ್ಲ ಹೋಗಲಿ ಶಾಲೆಗೆ..
@ಪ್ರೇಮ್@
13.02.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ