ಶುಕ್ರವಾರ, ಫೆಬ್ರವರಿ 22, 2019

789. ಪ್ರೀತಿ

ಪ್ರೀತಿ

ಅದೆಷ್ಟು ಅಗಾಧವದು ಒಳಗೊಳಗೆ..
ಅಂತರಂಗದಲಿ ಹುದುಗಿಹುದು!!
ಯಾರೂ ಓದಲಾರರು, ಕಲಿಯಲಾರರು!
ಹುಡುಕಲಾರರು, ಕೆದಕಲಾರರು!!

ನನ್ನಂತರಾತ್ಮಕೆ ಮಾತ್ರ ತಿಳಿದ
ನಿನ್ನ ಭಾವಕೆ ಸುಲಭದಿ ಮಿಡಿದ
ಮೌನದಲೂ ಮಾತಾದ ಲಯವು
ಕಣ್ಣ ಕಾಂತಿಯ ಚೆಲುವಿನೊಲವು...

ಬುಟ್ಟಿಯಲಿ ತುಂಬಿದಷ್ಟು ಮುಗಿಯದ
ಅಗಾಧ ಒಲವ ಜಾಲವು
ಪ್ರೀತಿಯ ಸಾಗರದ ಹನಿಹನಿಯೂ
ನಿನಗಾಗೆ ಮೀಸಲು ಪ್ರಿಯ ಗೆಳತಿ !!
ಭಾವಬಳ್ಳಿ ಬೆಳೆದಿಹುದು ಸುತ್ತಿ!

ಬೆಸೆದಿಹುದು ಬಂಧ ಪ್ರೇಮದಲಿ
ಸಹಿಸಲಾಗದು ಇರಲು ದೂರದಲಿ
ನಿನ್ನಿರವೆ ನನ್ನಿರವು ಎದೆಯಾಳದಲಿ
ಮೊಗೆ ಮೊಗೆದು ಸುರಿವೆ ನಿನ್ನೊಡಲೊಳು...
ನಿನಗಾಗೆ ಬಾ ಚೆಲುವೆ ನಗುವಿನೊಳು...
@ಪ್ರೇಮ್@
22.02.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ