ನನ್ನವಳು
ನನ್ನವಳು ಅವಳು
ಉಗಿದು ಬರಮಾಡಿಕೊಳುವವಳು
ನನಗಾಗಿ ಕಾಯುತಿರುವವಳು
ನನಗಾಗಿ ಮನೆಗೆ ಬಂದವಳು
ಹುಸಿ ಕೋಪ ನನ್ಮೇಲೆ ತೋರುವವಳು
ಮನದಣಿಯೆ ಊಟ ಬಡಿಸುವವಳು
ಕೆಂಡದಂಥ ಕೋಪ ಕಾರುವವಳು
ಮನೆ ಮನ ಓರಣವಾಗಿಡುವವಳು
ನನ್ನ ಹಾಗೂ ಮಕ್ಕಳ ಸಾಕುವವಳು
ಸರ್ವ ಬಂಧುಗಳ ಸುಧಾರಿಸುವವಳು
ಮೂತಿ ತಿರುವುತ ಡಜಾರುವವಳು
ಮುದ್ದು ಮಾಡೊ ಪೆದ್ದಿಯೇ ಇವಳು
ಪ್ರೀತಿಯೂಟ ಕುಟುಂಬಕೆ ಹಂಚುವವಳು
ಕುಡಿನೋಟದಿ ಇನಿಯನ ಕೊಲ್ಲುವವಳು
ಜೀವನದ ಪಾಠ ಕಲಿಸಿದವಳು
ನನ್ನ ಗೃಹಸ್ಥನಾಗಿ ಮಾಡಿದವಳು
ಜವಾಬ್ದಾರಿಯ ಹೊರಲು ಕಲಿಸಿದವಳು
ಮನೆಯ ಗೃಹ ಲಕ್ಷ್ಮಿಯೂ ಇವಳು
ಸಿಟ್ಟಿನಲ್ಲಿ ಭದ್ರ ಕಾಳಿಯಾಗುವವಳು
ಮಕ್ಕಳಿಗೆ ಪ್ರೀತಿಯ ಮಾತೆಯಿವಳು
ಅತ್ತೆ ಜೊತೆ ಜೋರು ಜಗಳವಾಡುವಳು
ಮಾವನ ತುಂಬಾ ಗೌರವದಿ ಕಾಣುವವಳು
ನನ್ನ ಕಣ್ಣ ರೆಪ್ಪೆಯೇ ಆಗಿರುವವಳು
ನನ್ನ ಮುದ್ದಿನ ಬಾಳ ಸಂಗಾತಿ ಅವಳು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ